SHOCKING NEWS: 5 ವರ್ಷದ ಮಗಳನ್ನು ಕೊಂದು ಅತ್ಯಾಚಾರದ ಕಥೆ ಕಟ್ಟಿದ್ದ ತಂದೆ ಅರೆಸ್ಟ್

ಚಿಕ್ಕಮಗಳೂರು: 5 ವರ್ಷದ ತನ್ನ ಪುಟ್ಟ ಕಂದಮ್ಮಳನ್ನೆ ಕೊಲೆಗೈದ ತಂದೆ ಅತ್ಯಾಚಾರದ ಕಥೆಕಟ್ಟಿ ಜೈಲು ಸೇರಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಸೆ.19ರಂದು 5 ವರ್ಷದ ಬಾಲಕಿ ಶವ ಪತ್ತೆಯಾಗಿತ್ತು. ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಂದೆ ಪೊಲೀಸರ ಬಳಿ ಹೇಳಿದ್ದ. ತನಿಖೆ ನಡೆಸಿದ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ.

5 ವರ್ಷದ ಮಗಳನ್ನು ಹತ್ಯೆಗೈದಿದ್ದ ತಂದೆ ಮಂಜುನಾಥ್ ಇದೀಗ ಸಿಕ್ಕಿಬಿದ್ದಿದ್ದು, ಪೊಲಿಸರು ಬಂಧಿಸಿದ್ದಾರೆ. ಮಂಜುನಾಥ್ ತನ್ನ ಪತ್ನಿಯ ಮೇಲೆ ಅನೈತಿಕ ಸಂಬಂಧ ಅನುಮಾನದಲ್ಲಿ ಪ್ರತಿದಿನ ಕುಡಿದು ಬಂದು ಜಗಳವಾಡುತ್ತಿದ್ದ. ಸೆ.19ರಂದು ಮಧ್ಯಾಹ್ನವೇ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಗಲಾಟೆ ಶುರುಮಾಡಿದ್ದ. 5 ವರ್ಷದ ಮಗಳು ಅಪ್ಪನನ್ನು ಕುಡಿದು ಗಲಾಟೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಾಳೆ.

ಕೋಪಗೊಂಡ ಮಂಜುನಾಥ್ ಮಗಳನ್ನು ಹೊಡೆದು ಕೊಂದಿದ್ದಾನೆ. ಬಳಿಕ ಅತ್ಯಾಚಾರದಕ್ಕೆ ಯತ್ನ ನಡೆಸಿ ಯಾರೋ ಮಗಳನ್ನು ಕೊಂದಿದ್ದಾರೆ ಎಂದು ಕಥೆ ಕಟ್ಟಿ ಎಸ್ಕೇಪ್ ಆಗಲು ಯತ್ನಿಸಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಅಜ್ಜಂಪುರ ಪೊಲೀಸರು ಜೈಲಿಗಟ್ಟಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read