ದೇಹದಿಂದ ‘ಯೂರಿಕ್ ಆಸಿಡ್‌’ ನಿವಾರಿಸಲು ಪ್ರತಿದಿನ ಸೇವಿಸಿ ಈ 5 ಆಹಾರ

 

ಯೂರಿಕ್ ಆಸಿಡ್‌ ಹೆಚ್ಚಳ ಆರೋಗ್ಯಕ್ಕೆ ಅಪಾಯಕಾರಿ. ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕೀಲು ನೋವು, ಊತ, ಸಂಧಿವಾತದಂತಹ ಸಮಸ್ಯೆಗಳು ಬರಬಹುದು. ಹಾಗಾಗಿ ಇದನ್ನು ನಿಯಂತ್ರಿಸಲು ಆಹಾರ ಕ್ರಮದ ಬಗ್ಗೆ ಗಮನ ಹರಿಸುವುದು ಅಗತ್ಯ. ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆ ಮೂಲಕ ಯೂರಿಕ್‌ ಆಸಿಡ್‌ ಅನ್ನು ನಿಯಂತ್ರಿಸಬಹುದು. ಅಂತಹ ಐದು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಪೇರಲ ಹಣ್ಣು : ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಯೂರಿಕ್ ಆಸಿಡ್‌ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು.

ಹಸಿರು ಸೊಪ್ಪು ಮತ್ತು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಇವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತವೆ. ಪಾಲಕ್, ಮೆಂತ್ಯ ಸೊಪ್ಪು ಮತ್ತು ಕೋಸುಗಡ್ಡೆಯಂತಹ ತರಕಾರಿಗಳು ಕೂಡ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.

ನಿಂಬೆಹಣ್ಣು : ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ದೇಹದಲ್ಲಿ ಯೂರಿಕ್ ಆಮ್ಲವನ್ನು ಕರಗಿಸಲು ಮತ್ತು ಅದನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯಬೇಕು. ಇದು ಯೂರಿಕ್‌ ಆಸಿಡ್‌ ಕಡಿಮೆ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹಕ್ಕೆ ಶಕ್ತಿ ತುಂಬುತ್ತದೆ.

ಸೇಬುಹಣ್ಣು: ಸೇಬುಹಣ್ಣಿನಲ್ಲಿರುವ ಮ್ಯಾಲಿಕ್ ಆಮ್ಲವು ದೇಹದಿಂದ ಯೂರಿಕ್ ಆಸಿಡ್‌ ಅನ್ನು ಹೊರಹಾಕುತ್ತದೆ. ಪ್ರತಿದಿನ ಆಪಲ್‌ ತಿನ್ನುವುದರಿಂದ ಯೂರಿಕ್ ಆಸಿಡ್‌ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಮೊಸರು : ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿದ್ದು, ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಯೂರಿಕ್ ಆಸಿಡ್‌ ನಿಯಂತ್ರಿಸಲು ಸಹಾಯ ಮಾಡುತ್ತವೆ. ಪ್ರತಿದಿನ ಒಂದು ಲೋಟ ಮೊಸರು ಸೇವನೆ ಮಾಡಬೇಕು. ಇದರೊಂದಿಗೆ  ಸಾಕಷ್ಟು ನೀರು ಕುಡಿಯಿರಿ ಮತ್ತು ನಿಯಮಿತ ವ್ಯಾಯಾಮ ಮಾಡಿ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read