BREAKING: ಮದುವೆ ಮೆರವಣಿಗೆ ಮೇಲೆ ಟ್ರಕ್ ಹರಿದು ಘೋರ ದುರಂತ: 5 ಜನ ಸಾವು, 11 ಮಂದಿ ಗಾಯ

ರೈಸೆನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಸುಲ್ತಾನ್‌ಪುರ ಪ್ರದೇಶದಲ್ಲಿ ಸೋಮವಾರ ಮದುವೆ ಮೆರವಣಿಗೆಯ ಮೇಲೆ ರಾಂಗ್‌ಸೈಡ್‌ನಿಂದ ಓವರ್‌ಟೇಕ್ ಮಾಡುತ್ತಿದ್ದ ಟ್ರಕ್‌ ಹರಿದು ಐವರು ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.

ಹೊಶಂಗಾಬಾದ್ ಜಿಲ್ಲೆಯ ಅಂಚಲಖೇಡದಿಂದ ಮೆರವಣಿಗೆ ಆಗಮಿಸಿತ್ತು. ಖಮಾರಿಯಾ ಗ್ರಾಮದ ಬಳಿ ರಾತ್ರಿ 10 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ರೈಸನ್ ಕಲೆಕ್ಟರ್ ಅರವಿಂದ್ ದುಬೆ ತಿಳಿಸಿದ್ದಾರೆ.

ಬಲಿಯಾದವರಲ್ಲಿ ಮೆರವಣಿಗೆಯ ಭಾಗವಾಗಿ ದೀಪಗಳನ್ನು ಹೊತ್ತ ಕಾರ್ಮಿಕರು ಸೇರಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸುಲ್ತಾನಪುರ ಪೊಲೀಸ್ ಠಾಣೆಯ ಉಸ್ತುವಾರಿ ರಜತ್ ಸಾರಥೆ ಹೇಳಿದರು.

ಐವರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ಮತ್ತು ಗಾಯಗೊಂಡವರಿಗೆ 50,000 ನೆರವು ಘೋಷಿಸಿದ್ದಾರೆ ಎಂದು ದುಬೆ ಹೇಳಿದ್ದಾರೆ.

https://twitter.com/ANI_MP_CG_RJ/status/1767333693578772490

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read