5 ರೂಪಾಯಿ ಕೇಳಿದ್ದಕ್ಕೆ ಬಾಲಕನ ಕೊಲೆ….!

ಕ್ಷುಲ್ಲಕ ಕಾರಣಕ್ಕೆ ಅಪರಾಧ ಕೃತ್ಯಗಳು ನಡೆಯುತ್ತಿರುವ ಹಲವು ಸಂಗತಿಗಳು ಈಗಾಗಲೇ ಬಹಿರಂಗವಾಗಿದ್ದು, ಇದೀಗ ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಐದು ರೂಪಾಯಿ ಕೇಳಿದನೆಂಬ ಕಾರಣಕ್ಕೆ ಬಾಲಕನೊಬ್ಬನನ್ನು ಕೊಲೆ ಮಾಡಲಾಗಿದೆ.

ಇಂಥದೊಂದು ಘಟನೆ ಹುಬ್ಬಳ್ಳಿಯ ಮಿಲ್ಲತ್ ನಗರದಲ್ಲಿ ನಡೆದಿದ್ದು, ನದೀಂ ಕೊಲೆಯಾದ ಬಾಲಕನಾಗಿದ್ದಾನೆ. ಸೆಟ್ಲಮೆಂಟ್ ನಿವಾಸಿ ರವಿ ವೆಂಕಟೇಶ ಬಳ್ಳಾರಿ ಎಂಬಾತ ಈ ಹತ್ಯೆ ಮಾಡಿದ್ದು, ಬೆಂಡಿಗೇರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಿಲ್ಲತ್ ನಗರದ ಆಟದ ಮೈದಾನದ ಬಳಿ ನದೀಮ್ ಆಟವಾಡುತ್ತಿದ್ದು, ಈ ವೇಳೆ ಅಲ್ಲಿಗೆ ಬಂದ ರವಿ ಬಳಿ ಐದು ರೂಪಾಯಿ ಕೇಳಿದ್ದಾನೆ. ಇದನ್ನು ನೀಡಿದ ಬಳಿಕವೂ ನದೀಮ್ ಮತ್ತೆ ಐದು ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಇದರಿಂದ ಸಿಟ್ಟಿಗೆದ್ದ ರವಿ ಆತನ ಕೆನ್ನೆಗೆ ಹೊಡೆದಿದ್ದಾನೆ.

ಇದರ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇದರಿಂದ ಹೆದರಿದ ರವಿ ಶವವನ್ನು ಪೊದೆ ಬಳಿ ಎಸೆದಿದ್ದು, ಬಳಿಕ ಅನುಮಾನ ಬರಬಾರದೆಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read