400 ಕೆಜಿ ಮಾವು, 50 ಕೆಜಿ ಮೀನು, 50 ಕೆಜಿ ರಸಗುಲ್ಲಾ: ತ್ರಿಪುರಾ ಸಿಎಂಗೆ ‘ವಿಶೇಷ ಗಿಫ್ಟ್’ ಕಳುಹಿಸಿದ ಬಾಂಗ್ಲಾ PM ಹಸೀನಾ.!

ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಗೆ ವಿಶೇಷವಾದ ಉಡುಗೊರೆಯೊಂದನ್ನು ಕಳುಹಿಸಿದ್ದಾರೆ.

ಉಡುಗೊರೆಯಲ್ಲಿ 400 ಕೆಜಿ ಹರಿವಂಗ ಮಾವಿನಹಣ್ಣು, 50 ಕೆಜಿ ಹಿಲ್ಸಾ ಮೀನು ಮತ್ತು 50 ಕೆಜಿ ರಸಗುಲ್ಲಾವನ್ನು ಒಳಗೊಂಡಿದೆ, ಇದು ಎರಡು ನೆರೆಯ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧ ಮತ್ತು ಪರಸ್ಪರ ಗೌರವವನ್ನು ಸಂಕೇತಿಸುತ್ತದೆ.

ಇಂದು, ನಾವು ನಮ್ಮ ಗೌರವಾನ್ವಿತ ಪ್ರಧಾನಿ ಶೇಖ್ ಹಸೀನಾ ಅವರಿಂದ ತ್ರಿಪುರಾದ ಗೌರವಾನ್ವಿತ ಮುಖ್ಯಮಂತ್ರಿಗೆ 400 ಕೆ ಜಿ ಹರಿವಂಗ ಮಾವಿನಹಣ್ಣು, 50 ಕೆಜಿ ಹಿಲ್ಸಾ ಮೀನು ಮತ್ತು 50 ಕೆಜಿ ರಸಗುಲ್ಲಾವನ್ನು ಸ್ವೀಕರಿಸಿದ್ದೇವೆ” ಎಂದು ಬಾಂಗ್ಲಾದೇಶ ಸಹಾಯಕ ಹೈಕಮಿಷನ್ ಪ್ರಥಮ ಕಾರ್ಯದರ್ಶಿ ಮೊಹಮ್ಮದ್ ಎ ಚೌಧರಿಅವರು ಹೇಳಿದರು.ಈ ಉಡುಗೊರೆಗಳನ್ನು ಮುಖ್ಯಮಂತ್ರಿಗಳ ಕಚೇರಿಗೆ ತಲುಪಿಸಲು ಅಧಿಕಾರಿಗಳು ತ್ವರಿತವಾಗಿ ವ್ಯವಸ್ಥೆ ಮಾಡಿದ್ದಾರೆ, ಇದು ಸಹಕಾರ ಮತ್ತು ಸೌಹಾರ್ದಯುತ ಸಂಬಂಧವನ್ನು ಬೆಳೆಸಲು ಎರಡೂ ದೇಶಗಳು ನೀಡುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಪ್ರಧಾನಿ ಶೇಖ್ ಹಸೀನಾ ಅವರಿಂದ ಈ ಉಡುಗೊರೆಗಳನ್ನು ಸ್ವೀಕರಿಸಲು ನಮಗೆ ಸಂತೋಷವಾಗಿದೆ. ಇಂತಹ ಆತಿಥ್ಯಗಳು ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read