BIG NEWS: ವಿಶ್ವದ ಶೇ. 40ರಷ್ಟು ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿಲ್ಲ: ಯುನೆಸ್ಕೋ ವರದಿಯಲ್ಲಿ ಬಹಿರಂಗ

ನವದೆಹಲಿ: ವಿಶ್ವದ ಶೇಕಡ 40ರಷ್ಟು ಜನರಿಗೆ ಮಾತೃಭಾಷೆ ಶಿಕ್ಷಣ ಸಿಗುತ್ತಿಲ್ಲ ಎಂದು ಯುನೆಸ್ಕೋ ವರದಿಯಲ್ಲಿ ಬಹಿರಂಗವಾಗಿದೆ.

ಜಾಗತಿಕವಾಗಿ ಶೇಕಡ 40ರಷ್ಟು ಜನರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋದ ಜಾಗತಿಕ ಶಿಕ್ಷಣ ಮೇಲ್ವಿಚಾರಣೆ ತಂಡ(ಜಿಇಎಂ) ತಿಳಿಸಿದೆ.

ಜಾಗತಿಕ ಶಿಕ್ಷಣ ಮಾನಿಟರಿಂಗ್ ಅಧ್ಯಯನದಲ್ಲಿ ಮಾತೃಭಾಷೆ ಶಿಕ್ಷಣದ ಕುರಿತಂತೆ ಆಯಾ ದೇಶದಲ್ಲಿ ತಿಳಿವಳಿಕೆಯ ಹೊರತಾಗಿ ಅಳವಡಿಸಿಕೊಳ್ಳುವವರ ಸಂಖ್ಯೆ ಸೀಮಿತವಾಗಿದೆ. ಅಲ್ಲದೆ ಶಿಕ್ಷಣದಲ್ಲಿ ಮಾತೃಭಾಷೆ ಬಳಕೆಗೆ ಅನೇಕ ಸವಾಲುಗಳಿವೆ ಎಂದು ವರದಿ ತಿಳಿಸಿದೆ.

ಶಿಕ್ಷಕರ ಸಾಮರ್ಥ್ಯ, ವಸ್ತುಗಳ ಲಭ್ಯತೆ ಮತ್ತು ಸಮುದಾಯದ ವಿರೋಧ ಕೂಡ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಪ್ರಮಾಣ ಶೇಕಡ 90ರಷ್ಟಿದೆ. ಎಲ್ಲರಿಗೂ ಪ್ರಯೋಜನವಾಗುವ ಶಿಕ್ಷಣಕ್ಕೆ ವ್ಯವಸ್ಥೆ ರಚಿಸುವ ಗುರಿಯೊಂದಿಗೆ ಬಹುಭಾಷಾ ಶಿಕ್ಷಣ ನೀತಿಗಳು ಮತ್ತು ಅಭ್ಯಾಸಗಳನ್ನು ದೇಶಗಳು ಜಾರಿಗೆ ತರಬೇಕು ಎಂದು ಹೇಳಲಾಗಿದೆ.

ವಲಸೆಯಿಂದ ಭಾಷಾ ವೈವಿಧ್ಯತೆಯು ಹೆಚ್ಚುತ್ತಿದೆ. ಇದರಿಂದಾಗಿ ಜಗತ್ತಿನಾದ್ಯಂತ ಮೂರು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಭಾಷಾ ಅಡೆ-ತಡೆ ಎದುರಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.. ಶಿಕ್ಷಕರಲ್ಲಿ ಮಾತೃಭಾಷೆ ಬಳಕೆ ಸೀಮಿತವಾಗಿರುವುದು, ಪಠ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಕೊರತೆ, ಸಮುದಾಯದ ವಿರೋಧ ಮೊದಲಾದ ಸಮಸ್ಯೆಗಳಿಂದ ಮಾತೃ ಭಾಷೆ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸವಾಲು ಎದುರಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read