ಬಹ್ರೈಚ್: ಉತ್ತರ ಪ್ರದೇಶದ ಅಕ್ರಮ ಮದರಸಾದ ಶೌಚಾಲಯದೊಳಗೆ 40 ಅಪ್ರಾಪ್ತ ಬಾಲಕಿಯರು ಕೂಡಿಹಾಕಿ ಬೀಗ ಹಾಕಿರುವುದು ಪತ್ತೆಯಾಗಿದೆ.
ಇಲ್ಲಿನ ನೋಂದಣಿಯಾಗದ ಮದರಸಾದ ಶೌಚಾಲಯದೊಳಗೆ 9 ರಿಂದ 14 ವರ್ಷ ವಯಸ್ಸಿನ 40 ಬಾಲಕಿಯರು ಬಂಧಿಯಾಗಿರುವುದು ಗುರುವಾರ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಯಾಗಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಅಶ್ವಿನಿ ಕುಮಾರ್ ಪಾಂಡೆ ಮಾಹಿತಿ ನೀಡಿ, ಪಯಾಗಪುರ ತಹಸಿಲ್ ವ್ಯಾಪ್ತಿಯ ಪಹಲ್ವಾರಾ ಗ್ರಾಮದ ಮೂರು ಅಂತಸ್ತಿನ ಕಟ್ಟಡದೊಳಗೆ ಅಕ್ರಮ ಮದರಸಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪದೇ ಪದೇ ದೂರುಗಳು ಬಂದಿವೆ.
ಬುಧವಾರ, ನಾವು ಪರಿಶೀಲನೆಗಾಗಿ ಕಟ್ಟಡಕ್ಕೆ ಹೋದಾಗ, ಮದರಸಾ ನಿರ್ವಾಹಕರು ಆರಂಭದಲ್ಲಿ ನಮ್ಮನ್ನು ಮೇಲಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಪೊಲೀಸರ ಸಮ್ಮುಖದಲ್ಲಿ, ನಾವು ಆವರಣವನ್ನು ಪ್ರವೇಶಿಸಿದಾಗ, ಟೆರೇಸ್ನಲ್ಲಿರುವ ಶೌಚಾಲಯ ಲಾಕ್ ಆಗಿರುವುದನ್ನು ನಾವು ಕಂಡುಕೊಂಡೆವು ಎಂದು ಅವರು ಹೇಳಿದ್ದಾರೆ.
ಮಹಿಳಾ ಪೊಲೀಸ್ ಸಿಬ್ಬಂದಿ ಬಾಗಿಲು ತೆರೆದಾಗ, ಶೌಚಾಲಯದೊಳಗೆ ಅಡಗಿಕೊಂಡಿದ್ದ 9 ರಿಂದ 14 ವರ್ಷ ವಯಸ್ಸಿನ 40 ಬಾಲಕಿಯರು ಒಬ್ಬೊಬ್ಬರಾಗಿ ಹೊರಬಂದರು. ಹುಡುಗಿಯರು ಭಯಭೀತರಾಗಿ ಕಾಣುತ್ತಿದ್ದರು ಮತ್ತು ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೊಹಮ್ಮದ್ ಖಾಲಿದ್ ಅವರನ್ನು ಸಂಸ್ಥೆಯ ನೋಂದಣಿ ಮತ್ತು ಕಾನೂನುಬದ್ಧತೆಯನ್ನು ಪರಿಶೀಲಿಸಲು ಕೇಳಲಾಗಿದೆ.
ಖಾಲೀದ್ ಅವರ ಪ್ರಕಾರ, ಮದರಸಾ ಸುಮಾರು ಮೂರು ವರ್ಷಗಳಿಂದ ನೋಂದಣಿ ಇಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.