ಧಾರವಾಡ : ಟಿನ್ನರ್ ಬಾಟಲಿಯಿಂದ ಬೆಂಕಿ ತಗುಲಿ 4 ವರ್ಷದ ಬಾಲಕ ದುರ್ಮರಕ್ಕೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಅವಘಡದಲ್ಲಿ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲಗೇರಿ ರಸ್ತೆಯ ಸಂತೋಷ ನಗರದ 2 ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಚಳಿ ಇದೆ ಅಂತ ಕುಪ್ಪಡಗಿಯನ್ನ ಹಾಕಿ ಬೆಂಕಿ ಹಾಕಲಾಗಿತ್ತು, ಆದರೆ ಪಕ್ಕದಲ್ಲೇ ಇದ್ದ ಬಾಲಕ ಅಗಸ್ತ್ರ್ಯ ಮಾಶಾಳ್ ಟಿನ್ನರ್ ಬಾಟಲಿ ಉರುಳಾಡಿಸಿ ಆಟವಾಡಿದ್ದಾನೆ. ಬಾಟಲಿ ಆಕಸ್ಮಾತ್ ಆಗಿ ಬೆಂಕಿಗೆ ಬಿದ್ದಿದ್ದು, ಬೆಂಕಿ ಬಾಲಕನ ದೇಹಕ್ಕೆ ಹರಡಿ ಬಾಲಕ ಸುಟ್ಟು ಹೋಗಿದ್ದಾನೆ.
ಮಗುವನ್ನು ಉಳಿಸಿಕೊಳ್ಳಲು ಕುಟುಂಬದವರು ಎಷ್ಟೇ ಕಷ್ಟ ಪಟ್ಟರೂ ಆಗಲಿಲ್ಲ. ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮಗುವನ್ನು ಉಳಿಸಲು ಯತ್ನಿಸಿದ ತಂದೆ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
You Might Also Like
TAGGED:ಧಾರವಾಡ