4 ಮಕ್ಕಳು ಸೇರಿ ಐವರು ನೀರು ಪಾಲು: ರಕ್ಷಣಾ ತಂಡಗಳಿಂದ ಶೋಧ

ಮುಂಬೈ: ಮಹಾರಾಷ್ಟ್ರದ ಲೋನಾವಾಲಾದಲ್ಲಿ ಭಾನುವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಶಿ ಅಣೆಕಟ್ಟು ತುಂಬಿ ಹರಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಧ್ಯಾಹ್ನ ಘಟನೆ ನಡೆದಿದ್ದು, ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಹುಡುಕಾಟದ ನಂತರ 2 ಶವಗಳನ್ನು ಹೊರತೆಗೆಯಲಾಗಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದವರು ಎಂದು ಪುಣೆ ಎಸ್ಪಿ ಪಂಕಜ್ ದೇಶಮುಖ್ ಹೇಳಿದ್ದಾರೆ.

ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ಹೊರ ತೆಗೆದಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಅವರು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತಕ್ಕೆ ಜಾರಿ ಜಲಾಶಯದ ಕೆಳಭಾಗದಲ್ಲಿ ಮುಳುಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read