ದೆಹಲಿ ತಾಪಮಾನ ಕುರಿತು ಶಾಕಿಂಗ್‌ ಮಾಹಿತಿ ನೀಡಿದ ಐಎಂಡಿ ಅಧಿಕಾರಿ

ಕಳೆದೊಂದು ವಾರದಿಂದ ದೆಹಲಿ ರೆಫ್ರಿಜರೇಟರ್ ಗಿಂತ ಕಡಿಮೆ ತಾಪಮಾನ ಹೊಂದಿದ್ದು, ಜನ ಚಳಿಯಿಂದ ಥರಗುಡುತ್ತಿದ್ದಾರೆ. ಸದ್ಯಕ್ಕೆ ಉತ್ತರ ಭಾರತದಲ್ಲಿನ ತಾಪಮಾನವು ಈ ವಾರ ಇನ್ನೂ ಕಡಿಮೆ ತಾಪಮಾನ ಹೊಂದಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದು, ಬಯಲು ಪ್ರದೇಶದಲ್ಲಿ ತಾಪಮಾನವು ಮುಂದಿನ ವಾರ -4 ಡಿಗ್ರಿ ಸೆಲ್ಸಿಯಸ್‌ ಗೆ ಇಳಿಯಲಿದೆ ಎಂದಿದ್ದಾರೆ. ಜನವರಿ 14 ಮತ್ತು 19 ರ ನಡುವೆ ತೀವ್ರ ಚಳಿಯಿರಲಿದ್ದು 16 ರಿಂದ 18 ರ ವರೆಗೆ ಕನಿಷ್ಠ ಮಟ್ಟದಲ್ಲಿರಲಿದೆ ಎಂದು ಆನ್‌ಲೈನ್ ಹವಾಮಾನ ವೇದಿಕೆಯಾದ ಲೈವ್ ವೆದರ್ ಆಫ್ ಇಂಡಿಯಾದ ಸಂಸ್ಥಾಪಕ ನವದೀಪ್ ದಹಿಯಾ ಟ್ವೀಟ್ ಮಾಡಿದ್ದಾರೆ.

ಉತ್ತರಭಾರತದಲ್ಲಿ ಇಷ್ಟು ಕಡಿಮೆ ತಾಪಮಾನವನ್ನ ದೆಹಲಿ ಕಂಡಿದ್ದನ್ನ ನಾನು ನೋಡಿಯೇ ಇರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

23 ವರ್ಷಗಳಲ್ಲಿ ಮೂರನೇ ಅತ್ಯಂತ ಕೆಟ್ಟ ಚಳಿಯನ್ನು ದಾಖಲಿಸಿದ ದಿನಗಳ ನಂತರ, ದೆಹಲಿಯಲ್ಲಿ ಗುರುವಾರ ಕನಿಷ್ಠ ತಾಪಮಾನವು 9.3 ಡಿಗ್ರಿ ಸೆಲ್ಸಿಯಸ್‌ನ ಷ್ಟಿದೆ. ಇದು ಋತುವಿನ ಸರಾಸರಿಗಿಂತ ಎರಡು ಹಂತಗಳಿಗಿಂತ ಹೆಚ್ಚಾಗಿದೆ. IMD ಪ್ರಕಾರ, ಗರಿಷ್ಠ ತಾಪಮಾನವು ಸುಮಾರು 19 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ.

2006 ರಲ್ಲಿ ಕಡಿಮೆ ತಾಪಮಾನವು 1.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದಾಗ ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read