BREAKING NEWS: ಜೈಪುರ-ಮುಂಬೈ ಎಕ್ಸ್ ಪ್ರೆಸ್ ರೈಲಿನಲ್ಲಿ ಯೋಧನಿಂದ ಗುಂಡಿನ ದಾಳಿ: ನಾಲ್ವರು ಸಾವು

ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ರೈಲ್ವೇ ರಕ್ಷಣಾ ಪಡೆ(ಆರ್‌ಪಿಎಫ್) ಯೋಧ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಲಿಯಾದವರಲ್ಲಿ ಮೂವರು ಪ್ರಯಾಣಿಕರು ಮತ್ತು ಆರ್‌ಪಿಎಫ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಸೇರಿದ್ದಾರೆ.

ರೈಲ್ವೆ ಸಂರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಚೇತನ್ ಎಲ್ಲಾ ನಾಲ್ವರಿಗೆ ಗುಂಡು ಹಾರಿಸಿದ್ದಾರೆ. ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ವಾಪಿಯಿಂದ ಬೊರಿವಲಿಯಿಂದ ಮೀರಾ ರೋಡ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ.

ಆರೋಪಿ ಕಾನ್‌ಸ್ಟೆಬಲ್‌ನನ್ನು ಮುಂಬೈ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಜೈಪುರ ಎಕ್ಸ್‌ಪ್ರೆಸ್‌ನ (ರೈಲು ಸಂಖ್ಯೆ 12956) B5 ಕೋಚ್‌ನಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಹೇಳಿಕೆಯ ಪ್ರಕಾರ, ರೈಲು ಸಂಖ್ಯೆ 12956 ರಲ್ಲಿ 31.7.23 ರಂದು 5.23 ಕ್ಕೆ ಬಿ 5 ಕೋಚ್‌ನಲ್ಲಿ ಗುಂಡಿನ ದಾಳಿ ನಡೆದಿದೆ.. ಬೆಂಗಾವಲು ಕರ್ತವ್ಯದಲ್ಲಿದ್ದ ಸಿ.ಟಿ. ಚೇತನ್ ಅವರು ಎಸ್ಕಾರ್ಟ್ ಪ್ರಭಾರಿ ಎಎಸ್ಐ ಟಿಕಾ ರಾಮ್ ಮೇಲೆ ಗುಂಡು ಹಾರಿಸಿರುವುದು ದೃಢಪಟ್ಟಿದೆ. ASI ಜೊತೆಗೆ 3 ನಾಗರಿಕರ ಮೇಲೆಯೂ ಗುಂಡು ಹಾರಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read