ನ್ಯೂಯಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ 325 ಫೆಲೆಸ್ತೀನ್ ಪರ ಪ್ರತಿಭಟನಾಕಾರರ ಬಂಧನ

ನ್ಯೂಯಾರ್ಕ್‌ : ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಸೋಮವಾರ ನ್ಯೂಯಾರ್ಕ್ ನಗರದ ಹಲವಾರು ಸೇತುವೆಗಳು ಮತ್ತು ಸುರಂಗವನ್ನು ತಡೆದು ಮೂರು ತಿಂಗಳ ಹಿಂದೆ ಕದನ ವಿರಾಮಕ್ಕೆ ಒತ್ತಾಯಿಸಿದ್ದಾರೆ.

ಈಸ್ಟ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರೂಕ್ಲಿನ್, ಮ್ಯಾನ್ಹ್ಯಾಟನ್ ಮತ್ತು ವಿಲಿಯಮ್ಸ್ಬರ್ಗ್ ಸೇತುವೆಗಳ ಪ್ರವೇಶದ್ವಾರಗಳಲ್ಲಿ ಮತ್ತು ಹಡ್ಸನ್ ನದಿಗೆ ಅಡ್ಡಲಾಗಿ ನ್ಯೂಯಾರ್ಕ್ ನಗರವನ್ನು ನ್ಯೂಜೆರ್ಸಿಯೊಂದಿಗೆ ಸಂಪರ್ಕಿಸುವ ಹಾಲೆಂಡ್ ಸುರಂಗದಲ್ಲಿ ನೂರಾರು  ಪ್ರತಿಭಟನಾಕಾರರು ಕುಳಿತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರು 325 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಮತ್ತು ಮಧ್ಯಾಹ್ನದ ಮೊದಲು ಎಲ್ಲಾ ಸ್ಥಳಗಳನ್ನು ತೆರವುಗೊಳಿಸಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಹಮಾಸ್‌ ದಾಳಿ ಮಾಡಿತ್ತು.ಇದರಲ್ಲಿ 1,200 ಜನರು ಕೊಲ್ಲಲ್ಪಟ್ಟರು. ಬಳಿಕ ಕಳೆದ ಮೂರು ತಿಂಗಳಿಂದ ಇಸ್ರೇಲ್-ಹಮಾಸ್‌ ನಡುವೆ ಯುದ್ಧ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read