ನಾಪತ್ತೆಯಾಗಿದ್ದ ಮಗು ಪಕ್ಕದ ಮನೆಯ ವಾಷಿಂಗ್ ಮೆಷಿನ್ ನಲ್ಲಿ ಪತ್ತೆ……!

ತಮಿಳುನಾಡಿನಲ್ಲಿ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ 3 ವರ್ಷದ ಬಾಲಕ ಇಂದು ತನ್ನ ನೆರೆಹೊರೆಯವರ ವಾಷಿಂಗ್ ಮೆಷಿನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಅಮಾನುಷ ಕೊಲೆ ಎಂದು ಶಂಕಿಸಿದ್ದು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ತಿರುನಲ್ವೇಲಿ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಬಾಲಕ ಸಂಜಯ್ ನಾಪತ್ತೆಯಾಗುವ ಮೊದಲು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದನು. ನಂತರ ಆತನ ಪೋಷಕರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ನಂತರ ಬಾಲಕ ತನ್ನ ಎದುರಿನ ಮನೆಯ ವಾಷಿಂಗ್ ಮೆಷಿನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 35 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ ಶಂಕಿತ ಆರೋಪಿಗಳು ಆಸ್ತಿ ವಿಚಾರಕ್ಕೆ ಮೃತ ಬಾಲಕನ ಕುಟುಂಬದೊಂದಿಗೆ ಜಗಳವಾಡುತ್ತಿದ್ದರು.

ನಾವು ಭೂ ವಿವಾದ ಸೇರಿದಂತೆ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಪೋಸ್ಟ್ ಮಾರ್ಟಮ್ ವರದಿಯ ನಂತರವೇ ಖಚಿತವಾಗಿ ಸಾವಿನ ಕಾರಣ ಹೇಳಬಹುದು ಎಂದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read