ರಾಜಸ್ಥಾನದ ಜೋಧ್‌ಪುರದಲ್ಲಿ ಶಾಕಿಂಗ್ ಘಟನೆ ನಡೆದಿದೆ. ಚಿಂದಿ ಆಯುವವನ ಮೂರು ವರ್ಷದ ಮಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನದ ಹೊರಗೆ ತನ್ನ ಹೆತ್ತವರೊಂದಿಗೆ ಮಲಗಿದ್ದಾಗ ಬಾಲಕಿಯನ್ನು ಅಪಹರಿಸಲಾಗಿದೆ. ಬೆಳಗ್ಗೆ ಆರು ಮೂವತ್ತರ ಸುಮಾರಿಗೆ ಸ್ಟಾಲ್ ಹಾಕಲು ಸ್ಥಳಕ್ಕೆ ಬಂದ ಮಹಿಳೆ ಕಣ್ಣಿಗೆ ಮಗು ಬಿದ್ದಿದೆ. ಮಗುವಿನ ತುಟಿಗಳು ಮತ್ತು ಬೆನ್ನಿನ ಮೇಲೆ ಕಚ್ಚಿದ ಗುರುತುಗಳಿದ್ದವು ಎಂದು ಮಹಿಳೆ ತಿಳಿಸಿದ್ದಾಳೆ.
ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾತ್ರಿ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಅಪರಿಚಿತನ ಪತ್ತೆಗೆ ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಪೀಡಿತೆ ಕುಟುಂಬ ಮಧ್ಯಪ್ರದೇಶದಿಂದ ಬಂದಿದ್ದು, ಜೋಧ್‌ಪುರದ ಕೊಳೆಗೇರಿಯಲ್ಲಿ ವಾಸವಾಗಿದೆ. ಹುಡುಗಿಯ ತಂದೆ ಚಿಂದಿ ಆಯುವವರಾಗಿದ್ದರೆ, ಆಕೆಯ ತಾಯಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
https://twitter.com/azizkavish/status/1825224383356719511?ref_src=twsrc%5Etfw%7Ctwcamp%5Etweetembed%7Ctwterm%5E1825224383356719511%7Ctwgr%5Eb12f74885426879a2a2119c4e526165fb6670b01%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Frajasthanshocker3yearoldgirlabductedandrapedbyunknownmaninjodhpurpoliceinvestigationunderwaywithcctvvideo-newsid-n627231125