SHOCKING NEWS: ಪಕ್ಕದ ಮನೆಯ ಹಣ, ಚಿನ್ನಾಭರಣ ದೋಚಿ ಮಲೆಮಹದೇಶ್ವರನ ಹುಂಡಿಗೆ ಹಾಕಿ ಕೈಮುಗಿದ ಕಳ್ಳರು

ಬೆಂಗಳೂರು: ನಕಲಿ ಕೀಲಿಕೈ ಬಳಸಿ ಪಕ್ಕದ ಮನೆಯ ಹಣ, ಚಿನ್ನಾಭರನವನ್ನೇ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಿನ ಕೆ.ಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್, ಆನಂದ್, ನಾನಿ ಎಂದು ಗುರುತಿಸಲಾಗಿದೆ.

ಮನೆಯ ಪಕ್ಕದಲ್ಲಿಯೇ ಆರೋಪಿಗಳು ಕಳೆದ 15 ವರ್ಷಗಳಿಂದ ವಾಸವಾಗಿದ್ದರು. ಮಾರ್ಚ್ 29ರಂದು ನಕಲಿ ಕೀಲಿಕೈ ಬಳಸಿ ಉಮಾ ಎಂಬುವವರ ಮನೆಯಲ್ಲಿದ್ದ 6 ಲಕ್ಷ ಹಣ, 3.22 ಲಕ್ಷ ಮೌಲ್ಯದ ಚಿನ್ನಭರಣ ಕದ್ದಿದ್ದಾರೆ. ಬಳಿಕ ಹೀಗೆ ಕದ್ದ ಹಣವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read