3 ದಿನದಲ್ಲಿ 40 ಬ್ಯಾಂಕ್ ಗ್ರಾಹಕರ ಲಕ್ಷ ಲಕ್ಷ ಹಣಕ್ಕೆ ಕನ್ನ; ಅಪರಿಚಿತ ಲಿಂಕ್‌ ಗಳ ಮೇಲೆ ಕ್ಲಿಕ್‌ ಮಾಡುವ ಮುನ್ನ ಓದಿ ಈ ಸುದ್ದಿ

ಮಹಾರಾಷ್ಟ್ರದಲ್ಲಿ 40 ಬ್ಯಾಂಕ್ ಗ್ರಾಹಕರು ಕೇವಲ 3 ದಿನದ ಅಂತರದಲ್ಲಿ ತಮ್ಮ ಖಾತೆಗಳಿಂದ ಲಕ್ಷ ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಅಪರಾಧವು ಮುನ್ನೆಲೆಗೆ ಬಂದಿದೆ. ಈ ಗ್ರಾಹಕರಿಗೆ ತಮ್ಮ KYC ಮತ್ತು PAN ವಿವರಗಳನ್ನು ನವೀಕರಿಸಲು ಲಿಂಕ್ ಕಳುಹಿಸಲಾಗಿತ್ತು.

ಬ್ಯಾಂಕ್ ಗ್ರಾಹಕರು ತಮ್ಮ ಗುರುತನ್ನು ಪರಿಶೀಲಿಸಲು ಕೆವೈಸಿ ಪ್ರಕ್ರಿಯೆಯು ಕಡ್ಡಾಯವಾಗಿದೆ. ಬ್ಯಾಂಕ್ ಗ್ರಾಹಕರಿಗೆ ಅವರ ಗೌಪ್ಯ ವಿವರಗಳನ್ನು ಕೇಳುವ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಮುಂಬೈ ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡಿರುವ 40 ಗ್ರಾಹಕರ ಪಟ್ಟಿಯಲ್ಲಿ ಕಿರುತೆರೆ ನಟಿ ಶ್ವೇತಾ ಮೆಮನ್ ಕೂಡ ಇದ್ದಾರೆ. ಮೆಮನ್ ಪೊಲೀಸ್ ದೂರಿನಲ್ಲಿ ತಿಳಿಸಿರುವಂತೆ, ನಕಲಿ ಟೆಕ್ಸ್ಟ್ ಸಂದೇಶದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದು ಅದು ತನ್ನ ಬ್ಯಾಂಕ್‌ನಿಂದ ಬಂದಿದೆ ಎಂದು ನಂಬಿದ್ದಾರೆ.

ಲಿಂಕ್ ಅವರನ್ನು ಪೋರ್ಟಲ್‌ಗೆ ನಿರ್ದೇಶಿಸಿದಂತೆ, ಅಲ್ಲಿ ನಟಿ ತಮ್ಮ ಗ್ರಾಹಕ ID, ಪಾಸ್‌ವರ್ಡ್‌ಗಳು ಮತ್ತು OTP ಅನ್ನು ನಮೂದಿಸಿದ್ದಾರೆ.

ಆಗ ಆಕೆಗೆ ಬ್ಯಾಂಕ್‌ನ ಉದ್ಯೋಗಿಯಂತೆ ನಟಿಸುತ್ತಿದ್ದ ಮಹಿಳೆಯೊಬ್ಬರಿಂದ ಕರೆ ಬಂದಿದ್ದು, ಆಕೆಯ ಮೊಬೈಲ್ ಸಂಖ್ಯೆಗೆ ಮತ್ತೊಂದು ಒಟಿಪಿ ಹಾಕುವಂತೆ ಕೇಳಿಕೊಂಡಿದ್ದಾಳೆ. ಇದರ ನಂತರ ಆಕೆಯ ಖಾತೆಯಿಂದ 57,636 ಡೆಬಿಟ್ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read