3 ತಿಂಗಳ ಶುಗರ್ ಲೆವೆಲ್ ಎಷ್ಟಿರಬೇಕು‌ ? HbA1c ಮಾಡಿಸಬೇಕೆ ? ಇಲ್ಲಿದೆ ಡಾ. ರಾಜು ಅವರ ಮಹತ್ವದ ಮಾಹಿತಿ

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಇತ್ತೀಚಿನ ದಿನಗಳಲ್ಲಿ ಹಿರಿಯರಲ್ಲಿ ಮಾತ್ರವಲ್ಲ ಚಿಕ್ಕಮಕ್ಕಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದೆ. ಡಯಾಬಿಟಿಸ್ ನಿಮಗಿದ್ದರೆ ಅಥವಾ ನಿಮ್ಮಲ್ಲಿ ಡಯಾಬಿಟಿಸ್ ಲಕ್ಷಣಗಳಿದ್ದರೆ ಯಾವುದಕ್ಕೂ ಶುಗರ್ ಚೆಕ್ ಮಾಡಬೇಕು ಎಂದೆನಿಸಿದ್ದರೆ ನೀವು ಯಾವುದೇ ಲ್ಯಾಬ್, ಆಸ್ಪತ್ರೆಗೆ ಹೋದರೆ ಅಲ್ಲಿ ಸಲಹೆ ನೀಡುವ ಟೆಸ್ಟ್ HbA1c.

ಏನಿದು HbA1c ಟೆಸ್ಟ್ ? ಯಾಕೆ ಮಾಡಿಸಬೇಕು ? ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಕಂಡು ಹಿಡಿಯಲು ಕೇವಲ HbA1c ಮಾಡಿಸಿದರೆ ಸಾಕೇ  ? ಎಂಬ ಬಗ್ಗೆ ಮಹತ್ವದ ಮಾಹಿತಿಯನ್ನು ಡಾ.ರಾಜು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ಸಕ್ಕರೆ ಕಾಯಿಲೆ ಅಥವಾ ಡಯಾಬಿಟೀಸ್ ಇರುವವರಿಗೆ HbA1c ಟೆಸ್ಟ್ ನಿಂದ ನಿಜಕ್ಕೂ ಪ್ರಯೋಜನಗಳಿವೆಯೇ ? ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಲು ಕಾರಣವೇನು ? HbA1c ಲೆವಲ್ ಯಾವೆಲ್ಲ ಕಾರಣಕ್ಕೆ ಏರುಪೇರಾಗುತ್ತದೆ ಎಂಬ ಬಗ್ಗೆಯೂ ವಿವರಿಸಿದ್ದಾರೆ.

ಮದ್ಯಪಾನ, ಯಾವುದೇ ಮಾತ್ರೆಗಳ ಸೇವನೆ, ಆಸ್ಪಿರನ್ ಟ್ಯಾಬ್ಲೆಟ್, ವಿಟಮಿನ್ ಮಾತ್ರೆಗಳಿಂದಲೂ ಬ್ಲಡ್ ಶುಗರ್ ಏರುಪೇರಾಗುತ್ತದೆ. ಒಂದು ವೇಳೆ ನಿಮ್ಮಲ್ಲಿ ಯಾವುದೇ ಸಣ್ಣಪುಟ್ಟ ಕಾಯಿಲೆಗಳಿದ್ದರೂ HbA1c ವ್ಯತ್ಯಾಸವಾಗಿರುತ್ತದೆ. ‌

ಹಾಗಾಗಿ HbA1c ಟೆಸ್ಟ್ ನಿಂದಲೇ ಶುಗರ್ ಅಥವಾ ಮಧುಮೇಹ ನಿರ್ಧರಿಸುವುದು ತಪ್ಪು. ಫಾಸ್ಟಿಂಗ್ ಬ್ಲಡ್ ಶುಗರ್ ಟೆಸ್ಟ್ ಅಥವಾ ಬೆಳಿಗ್ಗೆ ಉಪಹಾರ ಸೇವಿಸುವ ಮೊದಲು ಬ್ಲಡ್ ಟೆಸ್ಟ್ ಮಾಡಿಸುವುದು ಮುಖ್ಯ. ಈ ಟೆಸ್ಟ್ ನಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆಯೂ ಡಾ. ರಾಜು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಮಹತ್ವದ ಆರೋಗ್ಯ ಸಲಹೆಗಾಗಿ ಈ ವಿಡಿಯೋ ಕೊನೆವರೆಗೂ ನೋಡಿ ಅಭಿಪ್ರಾಯ ತಿಳಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read