ʼಮ್ಯಾಟ್ರಿಮೊನಿ ವೆಬ್‌ಸೈಟ್‌ʼ ಗಳಲ್ಲಿ ಪರಿಚಯವಾದ 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ: 26 ವರ್ಷದ ವ್ಯಕ್ತಿ ಅರೆಸ್ಟ್

ವಾಸೈ: ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳಲ್ಲಿ ಪರಿಚಯವಾದ 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ಮದುವೆಯ ಆಮಿಷವೊಡ್ಡಿ ಅತ್ಯಾಚಾರವೆಸಗಿದ 26 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ವಾಲಿವ್ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲದ ಹಿಮಾಂಶು ಯೋಗೇಶ್‌ಭಾಯ್ ಪಂಚಾಲ್ ಎಂಬಾತನೇ ಆರೋಪಿ.

ಆರೋಪಿ ನಕಲಿ ಪ್ರೊಫೈಲ್ ರಚಿಸಿ, ತನ್ನನ್ನು ದೆಹಲಿ ಕ್ರೈಂ ಬ್ರಾಂಚ್‌ನ ಸೈಬರ್ ಸೆಕ್ಯುರಿಟಿ ವಿಭಾಗದ ಅಧಿಕಾರಿಯೆಂದು ಹೇಳಿಕೊಂಡಿದ್ದ. ಅಲ್ಲದೆ, ಶ್ರೀಮಂತ ಕುಟುಂಬದವನೆಂದೂ, ಹಲವು ಆಸ್ತಿಗಳ ಒಡೆಯನೆಂದೂ ನಂಬಿಸಿದ್ದ. ಯುವತಿಯರನ್ನು ಸಂಪರ್ಕಿಸಿ, ವಾಸೈ, ಮುಂಬೈ ಮತ್ತು ಅಹಮದಾಬಾದ್‌ನ ಹೋಟೆಲ್‌ಗಳಿಗೆ ಕರೆಸಿ, ಮದುವೆಯಾಗುವ ಭರವಸೆ ನೀಡಿ, ನಕಲಿ ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿ, ಮೊದಲ ಭೇಟಿಯಲ್ಲೇ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ನಂತರ, ಹಣಕ್ಕಾಗಿ ಬೇಡಿಕೆಯಿಟ್ಟು, ಲೈಂಗಿಕವಾಗಿ ಮತ್ತು ಆರ್ಥಿಕವಾಗಿ ಶೋಷಿಸಿದ ನಂತರ ಸಂಪರ್ಕವನ್ನು ನಿಲ್ಲಿಸುತ್ತಿದ್ದ.

ಫೆಬ್ರವರಿ 6 ರಂದು ಮೀರಾ ರಸ್ತೆಯ 31 ವರ್ಷದ ಮಹಿಳೆಯೊಬ್ಬರು ವಾಲಿವ್ ಪೊಲೀಸರನ್ನು ಸಂಪರ್ಕಿಸಿ, ಪಂಚಾಲ್ ತನ್ನನ್ನು ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಿ, ನಕಲಿ ವಜ್ರದ ನೆಕ್ಲೆಸ್ ಉಡುಗೊರೆಯಾಗಿ ನೀಡಿ, ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಿಸಿದ್ದರು. ವಾಸೈ ಮತ್ತು ಅಹಮದಾಬಾದ್‌ನ ಎರಡು ಹೋಟೆಲ್‌ಗಳ ಹೆಸರನ್ನು ಸಹ ಅವರು ಉಲ್ಲೇಖಿಸಿದ್ದರು.

ವಾಲಿವ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಸನಾಪ್ ಮಾತನಾಡಿ, ಪಂಚಾಲ್ ಉತ್ತಮ ಇಂಗ್ಲಿಷ್‌ನಲ್ಲಿ ಮಾತನಾಡುವ ಮತ್ತು ಮಹಿಳೆಯರನ್ನು ಮೆಚ್ಚಿಸುವ ಚಾತುರ್ಯ ಹೊಂದಿದ್ದ. “ಅವನ ಬಳಿ ಐದು ಫೋನ್‌ಗಳು ಮತ್ತು ಆಪಲ್ ಲ್ಯಾಪ್‌ಟಾಪ್ ಇದ್ದವು ಮತ್ತು ಯಾವಾಗಲೂ ಹೋಟೆಲ್‌ಗಳ ವೈಫೈ ಮತ್ತು ವಾಟ್ಸಾಪ್ ಅನ್ನು ಕರೆಗಳಿಗಾಗಿ ಬಳಸುತ್ತಿದ್ದ. ತಾಂತ್ರಿಕ ತನಿಖೆಯ ನಂತರ ನಾವು ಅವನನ್ನು ಅಹಮದಾಬಾದ್‌ನಿಂದ ಬಂಧಿಸಿದ್ದೇವೆ” ಎಂದು ತಿಳಿಸಿದರು.

ಈ ಪ್ರಕರಣವು ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ವಂಚನೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read