ಗ್ರೀಸ್ ನಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 26 ಮಂದಿ ಸಾವನ್ನಪ್ಪಿ 85 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ರೀಸ್ ನ ಲಾರಿಸ್ಸಾ ನಗರದ ಬಳಿ ಮಂಗಳವಾರ ರಾತ್ರಿ ಈ ಅಪಘಾತ ನಡೆದಿದ್ದು, ಮುಖಾಮುಖಿ ಪರಿಣಾಮ ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸಲು ಯತ್ನಿಸಿದರೂ ಸಹ ಮುಗಿಲೆತ್ತರಕ್ಕೆ ಅದರ ಕೆನ್ನಾಲಿಗೆ ಚಾಚಿತ್ತು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೀವ್ರವಾಗಿ ಗಾಯಗೊಂಡಿರುವ 40 ಮಂದಿ ಪ್ರಯಾಣಿಕರನ್ನು ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.
https://twitter.com/ChuckCallesto/status/1630712148811759619?ref_src=twsrc%5Etfw%7Ctwcamp%5Etweetembed%7Ctwterm%5E1630712148811759619%7Ctwgr%5E48a7dcacad5f955ee2215e88cfabb556311bbc8b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fhindustantimes-epaper-dh6a1e8229c99f4403a520ea1f381dcb4f%2Fvideos26dead85injuredastwotrainscollideingreecerescueopson-newsid-n476115666