ತನ್ನನ್ನು ತಾನು ಮದುವೆಯಾಗಿ 24 ಗಂಟೆ ಒಳಗೆ ಡಿವೋರ್ಸ್​ ಕೊಟ್ಟ ಯುವತಿ….!

ಕ್ಷಮಾ ಬಿಂದು ಎಂಬ ಹೆಸರು ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಗುಜರಾತ್‌ನ 24 ವರ್ಷದ ಮಹಿಳೆ ಭಾರತದಲ್ಲಿ ಮೊದಲ ಬಾರಿಗೆ ಏಕಪತ್ನಿತ್ವದ ಪ್ರಕರಣದಲ್ಲಿ ತನ್ನನ್ನು ಮದುವೆಯಾದ ನಂತರ ವೈರಲ್ ಆಗಿದ್ದಳು. ಇದೀಗ ಅಂತಹುದೇ ಘಟನೆಯಲ್ಲಿ ಸೋಫಿ ಮೌರ್ ಎಂಬ ಮಹಿಳೆ ತನ್ನನ್ನು ತಾನು ಮದುವೆಯಾಗಿದ್ದಾಳೆ.

ಆದರೆ ಕ್ಷಮಾಗಿಂತ ಭಿನ್ನವಾಗಿ, ಸೋಫಿ ವಿಚ್ಛೇದನ ಬಯಸುತ್ತಿದ್ದಾಳೆ. ಅದೂ ಕೂಡ ಮದುವೆಯಾಗಿ 24 ಗಂಟೆಗಳ ನಂತರ !

ಈಕೆ ಕಥೆ ಏನೆಂದರೆ, 25 ವರ್ಷದ ಸೋಫಿ ಮೌರ್ ಫೆಬ್ರವರಿಯಲ್ಲಿ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದಳು. ಟ್ವಿಟರ್‌ನಲ್ಲಿ ವಧುವಿನ ಬಿಳಿ ಗೌನ್‌ನಲ್ಲಿರುವ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾಳೆ. ಸೋಫಿ ಕೇಕ್ ಕತ್ತರಿಸಿ ತನ್ನನ್ನು ತಾನು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಳು.

ನಂತರ ಮರುದಿನ ಕೇವಲ 24 ಗಂಟೆಗಳಲ್ಲಿ, ಸೋಫಿ, ಇನ್ನು ಮುಂದೆ ನನ್ನಿಂದ ಹೀಗೆ ಒಬ್ಬಳೇ ಇರಲು ಸಾಧ್ಯವಾಗುತ್ತಿಲ್ಲ, ವಿಚ್ಛೇದನವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾಳೆ. ಇವೆಲ್ಲಾ ಪ್ರಚಾರದ ಸ್ಟಂಟ್​ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read