ʼಡೇಟಿಂಗ್ ಆಪ್‌ʼ ನಲ್ಲಿ ಯುವತಿ ಹೆಸರಲ್ಲಿ ಇಂಜಿನಿಯರ್‌ ಖಾತೆ; ಉದ್ಯಮಿಗೆ ವಂಚಿಸಿದ ಆರೋಪದಲ್ಲಿ ಅರೆಸ್ಟ್

ನವಿ ಮುಂಬೈ – ಡೇಟಿಂಗ್ ಆ್ಯಪ್‌ನಲ್ಲಿ ಯುವತಿ ಹೆಸರಿನಲ್ಲಿ ಖಾತೆ ತೆರೆದು ನವಿ ಮುಂಬೈನ ಉದ್ಯಮಿಯೊಬ್ಬರಿಗೆ 33.27 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಸ್ಥಾನದ 24 ವರ್ಷದ ಇಂಜಿನಿಯರ್ ಒಬ್ಬನನ್ನು ಡೆಹ್ರಾಡೂನ್‌ನಲ್ಲಿ ಬಂಧಿಸಲಾಗಿದೆ.

ಆರೋಪಿ ಸಂಜಯ್ ಮೀನಾ, ಬಂಬಲ್ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯಂತೆ ನಟಿಸಿ, ಕೊಪರ್ಖೈರಾನೆಯ 54 ವರ್ಷದ ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿದ್ದ. ನಂತರ ವೈಯಕ್ತಿಕ ಖರ್ಚುಗಳಿಗೆ ಹಣ ಬೇಕೆಂದು ನಂಬಿಸಿ ಹಣ ಪಡೆದುಕೊಂಡಿದ್ದಾನೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಕಾಲೇಜು ಶುಲ್ಕ ಮತ್ತು ಇತರ ಖರ್ಚುಗಳಿಗೆ ಹಣ ಬೇಕೆಂದು ಹೇಳಿ ವಂಚಿಸಿದ್ದಾನೆ.

“ಬಂಧಿತ ಆರೋಪಿಯನ್ನು ಸಂಜಯ್ ಮೀನಾ ಎಂದು ಗುರುತಿಸಲಾಗಿದೆ. ಆತ ರಾಜಸ್ಥಾನದವನಾಗಿದ್ದು, ಬಂಬಲ್ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯಂತೆ ನಟಿಸಿ, ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಸಂದೇಶಗಳ ಮೂಲಕ ದೂರುದಾರರೊಂದಿಗೆ ಸಂವಹನ ನಡೆಸಿದ್ದರು. ಅವರು ವಾಟ್ಸಾಪ್‌ನಲ್ಲಿ ಯುವತಿಯೊಬ್ಬರ ಡಿಪಿ ಹಾಕಿಕೊಂಡಿದ್ದರು” ಎಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಗಜಾನನ್ ಕದಂ ತಿಳಿಸಿದ್ದಾರೆ.

ಮೀನಾ ಮಾರ್ಚ್‌ನಿಂದ ಜೂನ್ ವರೆಗೆ ಉದ್ಯಮಿಯೊಂದಿಗೆ ಚಾಟ್ ಮಾಡಿ ಪ್ರೀತಿಯಲ್ಲಿ ಬೀಳಿಸಿದ್ದ. ನಂತರ ಅವರ ನಂಬಿಕೆಯನ್ನು ಗಳಿಸಿ ವೈದ್ಯಕೀಯ ತುರ್ತು ಪರಿಸ್ಥಿತಿ, ಕಾಲೇಜು ಶುಲ್ಕ ಮತ್ತು ಇತರ ಖರ್ಚುಗಳಿಗೆ ಹಣ ಬೇಕೆಂದು ಹೇಳಿ ಹಣ ವರ್ಗಾಯಿಸುವಂತೆ ಮಾಡಿದ್ದಾನೆ.

ತನಿಖೆಯಲ್ಲಿ ಮೀನಾ ರಾಜಸ್ಥಾನದ ಬುಕ್ನಾ ಮೂಲದವನು ಎಂದು ತಿಳಿದುಬಂದಿದೆ. ತಾಂತ್ರಿಕ ವಿಶ್ಲೇಷಣೆಯ ಮೂಲಕ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳನ್ನು ಟ್ರ್ಯಾಕ್ ಮಾಡಿದಾಗ ಆರೋಪಿ ಉತ್ತರಾಖಂಡದಲ್ಲಿದ್ದಾನೆಂದು ಪತ್ತೆಯಾಯಿತು. ಅಲ್ಲಿ ಆತನನ್ನು ಬಂಧಿಸಲಾಗಿದೆ.

ಮೀನಾ ತನ್ನ ಹಲವಾರು ಗೆಳತಿಯರ ಬ್ಯಾಂಕ್ ಖಾತೆಗಳನ್ನು ಹಣ ಪಡೆಯಲು ಬಳಸಿಕೊಂಡಿದ್ದ. ಅಲ್ಲದೆ ಬೇರೆಯವರ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳನ್ನು ಬಳಸಿ ಸಂವಹನ ನಡೆಸುತ್ತಿದ್ದ. ಪೊಲೀಸರು ಕಾರು, ನಾಲ್ಕು ಮೊಬೈಲ್ ಫೋನ್‌ಗಳು, ಮ್ಯಾಕ್‌ಬುಕ್, ಹಾರ್ಡ್ ಡಿಸ್ಕ್ ಮತ್ತು ಡಾಂಗಲ್ ಅನ್ನು ವಶಪಡಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read