ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣವು ಕೆ.ಎಸ್.ಐ.ಐ.ಡಿ.ಸಿ. ಮೂಲಕ ರಾಜ್ಯ ಸರ್ಕಾರವು ನಿರ್ವಹಿಸಲು ಆರಂಭಿಸಿದ ಮೊದಲ ವಿಮಾನ ನಿಲ್ದಾಣವಾಗಿದೆ. ಎರಡು ವರ್ಷದಲ್ಲಿ ನಿಲ್ದಾಣದಿಂದ 2400 ವಿಮಾನಯಾನ ನಡೆಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ನಿರ್ವಹಣೆಯಲ್ಲಿ ಯಶಸ್ವಿಯಾಗಿದೆ.
ಶೀಘ್ರವೇ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ(ಎಫ್.ಟಿ.ಎ.) ಮತ್ತು ಎಂ.ಆರ್.ಒ. ವ್ಯವಸ್ಥೆಗಳನ್ನು ಆರಂಭಿಸಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕಳೆದ ಎರಡು ವರ್ಷದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಕಂಪನಿ 670 ಯಾನಗಳಿಂದ 31,500 ಪ್ರಯಾಣಿಕರಿಗೆ ಸೇವೆ ನೀಡಿದೆ. ಸ್ಟಾರ್ ಏರ್ ಸಂಸ್ಥೆಯು 1800 ಯಾನಗಳ ಮೂಲಕ 47,000 ಪ್ರಯಾಣಿಕರಿಗೆ ಸೇವೆ ನೀಡಿದೆ. ಸ್ಪೈಸ್ ಜೆಟ್ 530 ಯಾನಗಳ ಮೂಲಕ 25,000 ಪ್ರಯಾಣಿಕರಿಗೆ ಸೇವೆ ಒದಗಿಸಿದೆ. ಈ ನಿಲ್ದಾಣದ ಮೂಲಕ ಗೋವಾ, ಬೆಂಗಳೂರು, ಹೈದರಾಬಾದ್, ತಿರುಪತಿ, ಚೆನ್ನೈಗೆ ವಿಮಾನ ಸೇವೆ ಲಭ್ಯವಿದೆ. ಮಲೆನಾಡು ಭಾಗದಲ್ಲಿ ವಾಣಿಜ್ಯ, ಪ್ರವಾಸೋದ್ಯಮ,ಶೈಕ್ಷಣಿಕ ಚಟುವಟಿಕೆ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆತಿದೆ.
ಶೀಘ್ರವೇ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ಆರಂಭಿಸಲಾಗುವುದು. ವೈಮಾನಿಕ ಸೇವೆಯ ಬೇಡಿಕೆ ಪೂರೈಸಲು ಆಧುನಿಕ ಮಾದರಿಯ ಡಿಎಂಇ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ 24*7 ವಿಮಾನ ಸೇವೆ ಒದಗಿಸಬಹುದು. ಅಲ್ಲದೇ ದೇಶದ ಮತ್ತಷ್ಟು ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಸೇವೆ ಆರಂಭವಾಗಿ ಇಂದಿಗೆ 2 ವರ್ಷ
— M B Patil (@MBPatil) August 26, 2025
ನಮ್ಮ #KSIIDC ಮೂಲಕ ರಾಜ್ಯ ಸರಕಾರವೇ ನಿರ್ವಹಿಸಲು ಆರಂಭಿಸಿದ ಪ್ರಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿರುವ ವಿಮಾನ ನಿಲ್ದಾಣ ಇದಾಗಿದ್ದು, ಯಶಸ್ವಿಯಾಗಿ 2ವರ್ಷಗಳನ್ನು ಪೂರೈಸಿ 3ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಈ ಅವಧಿಯಲ್ಲಿ 1 ಲಕ್ಷಕ್ಕೂ… pic.twitter.com/shfMfFsSsB