24 ಗಂಟೆಯಲ್ಲಿ ದಾಖಲೆಯ 8,008 ಪುಲ್ಅಪ್ ಮಾಡಿದ ಯುವಕ

ಅಸಹಾಯಕರಿಗೆ ದಾನ ಮಾಡುವುದೇ ಮನುಷ್ಯನ ಮೂಲ ಧರ್ಮ. ಆದರೆ ಕೆಲ ಸ್ವಾರ್ಥಿಗಳು ದಾನ ಮಾಡುವುದಿರಲಿ, ಬೇರೆಯವರಿಗೆ ಸಹಾಯ ಮಾಡುವುದಕ್ಕೂ ಲೆಕ್ಕಾಚಾರ ಹಾಕಿರ್ತಾರೆ, ಆದರೆ ಇಲ್ಲೊಬ್ಬ ಯುವಕ ಬುದ್ಧಿಮಾಂದ್ಯದಿಂದ ಬಳಲುವವರಿಗೆ ಮಾಡಿದ ಕೆಲಸ ಸಮಾಜಕ್ಕೆ ಮಾದರಿಯಾಗಿದೆ.

ಜಾಕ್ಸನ್ ಇಟಾಲಿಯನ್, ಆಸ್ಟ್ರೇಲಿಯಾದ ಈ ಯುವಕನಿಗೆ ಫಿಟ್‌ನೆಸ್ ಅಂದರೆ ಒಂದು ರೀತಿ ಹುಚ್ಚು. ಈಗ ಅನೇಕ ಗಂಟೆಗಳ ಕಾಲ ವಿಶ್ರಾಂತಿಯೇ ಇಲ್ಲದೇ ವರ್ಕೌಟ್ ಮಾಡಿದ್ದು ಸುಮಾರು 8008 ಪುಲ್-ಅಪ್ ಗಳನ್ನ ಮಾಡಿದ್ದಾನೆ. ಅದು ಕೇವಲ 24 ಗಂಟೆಗಳಲ್ಲಿ ಮಾತ್ರ. ಅಷ್ಟಕ್ಕೂ ಇಷ್ಟು ಪುಲ್-ಅಪ್‌ಗಳನ್ನ ಮಾಡಿದಾದರೂ ಏಕೆ ಗೊತ್ತಾ? ಸುಮಾರು 4 ಲಕ್ಷಕ್ಕೂ ಹೆಚ್ಚು ಬುದ್ಧಿಮಾಂದ್ಯದವರಿಗೆ ಸಹಾಯ ಮಾಡಲೆಂದೇ ನಿಧಿ ಸಂಗ್ರಹ ಮಾಡಿದ್ದಾರೆ.

ಕಳೆದ ನವೆಂಬರ್ 15ರಲ್ಲೂ ನ್ಯೂ ಸೌತ್ ವೇಲ್ಸ್‌ನ ಸಿಡ್ನಿಯಲ್ಲಿ ಜಾಕ್ಸನ್ ಇದೇ ರೀತಿ ಫುಲ್ಅಪ್ ಗಳನ್ನ ಮಾಡಿದರು. ಆದರೆ ಅದು ಕೇವಲ ಮೂರು ಗಂಟೆ ಅವಧಿಯವರೆಗೆ ಮಾತ್ರ ಆಗಿತ್ತು, ಆದರೆ ಈ ಬಾರಿ 24 ಗಂಟೆಗಳ ಕಾಲ ಪುಲ್-ಅಪ್ ಮಾಡಿ ದಾಖಲೆಯನ್ನೇ ಮಾಡಿದ್ದಾರೆ.

ಜಾಕ್ಸನ್, ಒಂದು ಸದುದ್ದೇಶ ಇಟ್ಟುಕೊಂಡು ಮಾಡಿದ ಕೆಲಸ ಇದಾಗಿತ್ತು. ಅದರಿಂದ ಮೊದಲೇ ಅನೇಕರಿಗೆ ಈ ವಿಚಾರವನ್ನು ಹೇಳಿದರು. ಅಷ್ಟೆ ಅಲ್ಲ ತಾವು ಮಾಡುತ್ತಿರುವ ಈ ಒಂದೊಂದು ಪುಲ್-ಅಪ್ ಕಸರತ್ತಿಗೆ 0.66 ಡಾಲರ್ ಸಂಗ್ರಹಿಸಿದರು. ಆಶ್ಚರ್ಯ ಏನಂದ್ರೆ, ಇವರು ಮಾಡಿದ 8,008 ಪುಲ್-ಅಪ್ ನಿಂದಾಗಿ ಸುಮಾರು 5,914.72 ಡಾಲರ್ ಸಂಗ್ರಹ ಮಾಡಲಾಗಿತ್ತು.

ಈ ಒಂದು ದಾಖಲೆಯ ಪುಲ್‌ಅಪ್‌ಗಾಗಿ ಇವರು 8 ತಿಂಗಳ ಕಾಲ ತರಬೇತಿ ಪಡೆದಿದ್ದಾರೆ, ಈ ತರಬೇತಿ ನಂತರ ಜಾಕ್ಸನ್ ‘ನಾನು ನಿರ್ವಹಿಸುವ ಪ್ರತಿಯೊಂದು ಪುಲ್-ಅಪ್‌ಗೆ ಒಂದೊಂದು ಡಾಲರ್ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇನೆ. ಆದ್ದರಿಂದ ನಿಮ್ಮ ಕೈಲಾದ ದೇಣಿಗೆ ನೀಡಿ, ನಿಮ್ಮ ಈ ಸಹಾಯದಿಂದ ಬುದ್ಧಿಮಾಂದ್ಯತೆ ಇರುವವರಿಗೆ ಸಹಾಯವಾಗುತ್ತೆ. ದಯವಿಟ್ಟು ಸಹಾಯ ಮಾಡಿ’ ಎಂದು ಹೇಳಿದರು.

ಈಗಾಗಲೇ ಸಂಗ್ರಹವಾದ ಹಣ ಸಂಸ್ಥೆಗೆ ಸೇರಿದ್ದಾಗಿದೆ. ಈ ಹಣದಿಂದ ಬುದ್ಧಿಮಾಂದ್ಯ ಮಕ್ಕಳಿಗೆ ಬೇಕಾಗಿರುವ ಸಹಾಯ ಮಾಡಲಾಗುತ್ತೆ. ಆಸ್ಟ್ರೇಲಿಯಾ ಸರ್ಕಾರ ಕೂಡ ಜಾಕ್ಸನ್ ಮಾಡಿರುವ ಕೆಲಸ ನೋಡಿ ಮೆಚ್ಚುಗೆಯನ್ನ ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read