ತೈಲ ಟ್ಯಾಂಕರ್‌ಗೆ ಬಸ್ ಡಿಕ್ಕಿಯಾಗಿ ಭಾರಿ ಬೆಂಕಿ: 21 ಮಂದಿ ಸಾವು, 38 ಜನರಿಗೆ ಗಾಯ

ಕಾಬುಲ್: ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಭಾನುವಾರ ತೈಲ ಟ್ಯಾಂಕರ್ ಮತ್ತು ಮೋಟಾರ್ ಬೈಕ್‌ ಗೆ ಬಸ್ ಡಿಕ್ಕಿ ಹೊಡೆದು 21 ಜನ ಸಾವನ್ನಪ್ಪಿದ್ದಾರೆ. 38 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮಗೆ ಬಂದ ಮಾಹಿತಿಯ ಆಧಾರದ ಮೇಲೆ, ಪ್ರಯಾಣಿಕರಿದ್ದ ಬಸ್, ಟ್ಯಾಂಕರ್ ಮತ್ತು ಮೋಟಾರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 21 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ಮೊಹಮ್ಮದ್ ಖಾಸಿಮ್ ರಿಯಾಜ್ ತಿಳಿಸಿದ್ದಾರೆ.

ಅಪಘಾತದಲ್ಲಿ ಇನ್ನೂ 38 ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಮಾಹಿತಿ ಇಲಾಖೆ ತಿಳಿಸಿದೆ.

ಡಿಕ್ಕಿ ಹೊಡೆದ ನಂತರ ವಾಹನಗಳು ಹೊತ್ತಿ ಉರಿದಿವೆ. ಬೆಂಕಿ ಜ್ವಾಲೆ ಆವರಿಸಿ ವಾಹನಗಳು ಸುಟ್ಟು ಕರಕಲಾಗಿವೆ. ಹೆಲ್ಮಂಡ್‌ನ ಗ್ರಿಷ್ಕ್ ಜಿಲ್ಲೆಯ ರಾಜಧಾನಿ ಕಾಬೂಲ್ ಮತ್ತು ಉತ್ತರದ ಹೆರಾತ್ ನಗರದ ನಡುವಿನ ಮುಖ್ಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಅಪಘಾತ ಸಂಭವಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read