ನವದೆಹಲಿ : 2006 ರ ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ತಡೆಹಿಡಿದಿದೆ. 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಆದರೆ ಖುಲಾಸೆಗೊಂಡ 12 ಜನರನ್ನು ಮತ್ತೆ ಬಂಧಿಸಲಾಗುವುದಿಲ್ಲ ಎಂದು ಹೇಳಿದೆ. ಹೈಕೋರ್ಟ್ನ ಖುಲಾಸೆಯು ಪೂರ್ವನಿದರ್ಶನವಾಗುವುದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದೆ.
ಜುಲೈ 11, 2006 ರಂದು, ಮುಂಬೈ ಸ್ಥಳೀಯ ರೈಲುಗಳ ಏಳು ಬೋಗಿಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 189 ಜನರು ಸಾವನ್ನಪ್ಪಿದರು ಮತ್ತು 824 ಜನರು ಗಾಯಗೊಂಡಿದ್ದರು.
You Might Also Like
TAGGED:ಮುಂಬೈ ರೈಲು ಸ್ಫೋಟ ಪ್ರಕರಣ