ಲಂಡನ್ ನಲ್ಲಿ ಭಾರತೀಯ ಮೂಲದ 20 ವರ್ಷದ ಯುವತಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ಲಂಡನ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ ರಿಲೀಸ್ ಮಾಡಿದ್ದಾರೆ.
ವೆಸ್ಟ್ ಮಿಡ್ಲ್ಯಾಂಡ್ಸ್ನಲ್ಲಿ 20 ರ ಹರೆಯದ ಭಾರತೀಯ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು, ಇದನ್ನು ಪೊಲೀಸರು “ಜನಾಂಗೀಯವಾಗಿ ” ದಾಳಿ ಎಂದು ಹೇಳಿದ್ದಾರೆ.. ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ, ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಕಂಡುಕೊಂಡರು. ಈ ಘಟನೆಯು ಸಮುದಾಯವನ್ನು ಬೆಚ್ಚಿಬೀಳಿಸಿದೆ ಮತ್ತು ಈ ಪ್ರದೇಶದ ಮಹಿಳೆಯರ ಸುರಕ್ಷತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.
ತನಿಖಾಧಿಕಾರಿಗಳ ಪ್ರಕಾರ, ಶಂಕಿತನ ವಯಸ್ಸು 30 ರಷ್ಟಿದ್ದು, ಸಣ್ಣ ಕೂದಲು ಹೊಂದಿ ಕಪ್ಪು ಬಟ್ಟೆ ಧರಿಸಿದ್ದಾನೆ. ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಆರೋಪಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಆತನನ್ನು ಗುರುತಿಸಲು ಸಹಾಯ ಮಾಡುವ ಯಾವುದೇ ಮಾಹಿತಿಯೊಂದಿಗೆ ಮುಂದೆ ಬರುವಂತೆ ಸಾರ್ವಜನಿಕರನ್ನು ಕೋರಿದ್ದಾರೆ.
