2029ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುವ ಭರವಸೆಯಲ್ಲಿದ್ದ ಯೂಟ್ಯೂಬರ್ ರವೀಶ್ ರಾಠಿ, ಬಾಬಾ ರಾಮ್‌ದೇವ್ ಅವರ ಗುಲಾಬ್ ಶರಬತ್ ವಿರುದ್ಧ ವಿಡಿಯೋ ಮಾಡುವ ಭರದಲ್ಲಿ ಬಹುತೇಕ ಪೂರ್ತಿ ಬಾಟಲ್ ರೂಹ್ ಅಫ್ಜಾ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ !
ಸಂಜೆಯ ಟ್ಯೂಷನ್‌ಗೆ ಹೋಗಿದ್ದಾಗ ಚೆನ್ನಾಗಿದ್ದ ರವೀಶ್, ಟ್ಯೂಷನ್‌ನಿಂದ ಕರೆದುಕೊಂಡು ಬರುವಾಗಲೂ ಸಹಜ ಸ್ಥಿತಿಯಲ್ಲಿದ್ದರು. ಕಾರಿನಲ್ಲಿ ಅಜಿತ್ ಅಂಜುಮ್ ಮತ್ತು ಸಾಕ್ಷಿ ಜೋಶಿ ಅವರ ಕೆಲವು ವಿಡಿಯೋಗಳನ್ನು ನೋಡಲು ಶುರುಮಾಡಿದ. ಪಾರ್ಕಿಂಗ್‌ನಲ್ಲೇ ಕನಿಷ್ಠ 5 ನಿಮಿಷಗಳ ಕಾಲ ವಿಡಿಯೋ ನೋಡುತ್ತಾ ಕುಳಿತಿದ್ದ ಎಂದು ರವೀಶ್ ಅವರ ತಂದೆ ನೆನಪಿಸಿಕೊಂಡಿದ್ದಾರೆ.
ಬಾಬಾ ರಾಮ್‌ದೇವ್ ಕೆಲ ದಿನಗಳ ಹಿಂದೆ ತಮ್ಮದೇ ಗುಲಾಬಿ ಸುವಾಸನೆಯ ಸಕ್ಕರೆ ಪಾಕವನ್ನು ಬಿಡುಗಡೆ ಮಾಡಿದ್ದರು. ಅದರ ಪ್ರಚಾರದ ವಿಡಿಯೋದಲ್ಲಿ ರೂಹ್ ಅಫ್ಜಾವನ್ನು ಟೀಕಿಸಿದ್ದರು. ಏಕೆಂದರೆ ರೂಹ್ ಅಫ್ಜಾದಿಂದ ಬರುವ ಸ್ವಲ್ಪ ಆದಾಯವು ಇಸ್ಲಾಮಿಕ್ ಚಾರಿಟಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹೋಗುತ್ತದೆ ಎಂಬ ಆರೋಪವಿತ್ತು.
ರವೀಶ್ ಎಲ್ಲಾ ವಿಡಿಯೋಗಳನ್ನು ನೋಡಿದ ನಂತರ ತಕ್ಷಣ ತನ್ನ ಕೋಣೆಗೆ ಹೋಗಿ ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್ ಮತ್ತು ಇನ್ನೊಂದು ಆ್ಯಪ್‌ನಿಂದ ತಕ್ಷಣವೇ ರೂಹ್ ಅಫ್ಜಾ ಬಾಟಲಿಯನ್ನು ಆರ್ಡರ್ ಮಾಡಿ. ಅದು ಬೇಗ ಬರುವಂತೆ ನೋಡಿಕೊಂಡ ನಂತರ ತಾನೇ ವಿಡಿಯೋ ಮಾಡಲು ಶುರುಮಾಡಿದ ಎಂದು ಖಾಸಗಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುವ ರವೀಶ್ ಅವರ ತಂದೆ ವಿವರಿಸಿದ್ದಾರೆ.
ರಾಮ್‌ದೇವ್‌ರನ್ನು ನಾಶಮಾಡಲು 5 ನಿಮಿಷಗಳ ಏಕಪಾತ್ರ ಮತ್ತು ಕನಿಷ್ಠ 3 ರೀಲ್ಸ್‌ಗಳನ್ನು ಮಾಡಲು ರವೀಶ್ ಯೋಜಿಸಿದ್ದ. ಅವನು ರೂಹ್ ಅಫ್ಜಾ ಸಿರಪ್ ಅನ್ನು ಡೈಲೂಟ್ ಮಾಡದೆ ನೇರವಾಗಿ ಕುಡಿಯಲು ಪ್ರಾರಂಭಿಸಿದ. ರೀಲ್ಸ್ ಸರಿಯಾಗಿ ಬರಲು ಸಾಕಷ್ಟು ರಿಟೇಕ್‌ಗಳು ಬೇಕಾಗಿದ್ದವು. ಉತ್ಸಾಹದಲ್ಲಿ ಆತ ರೂಹ್ ಅಫ್ಜಾವನ್ನು ಕುಡಿಯುತ್ತಲೇ ಇದ್ದ. ಮೊದಲ ವಿಡಿಯೋಗಾಗಿ ಸುಮಾರು 20 ಟೇಕ್‌ಗಳನ್ನು ಮಾಡಿದಾಗ ಕುಸಿದುಬಿದ್ದ ಎಂದು ಉತ್ತರ ದೆಹಲಿಯ ಆಸ್ಪತ್ರೆಯ ಹೊರಗೆ ಪತ್ರಕರ್ತರಿಗೆ ರವೀಶ್ ಅವರ ತಂದೆ ತಿಳಿಸಿದ್ದಾರೆ.