ಸಬ್‌ವೇ ರೈಲು ಕದ್ದ ಅಪ್ರಾಪ್ತರಿಂದ ಜಾಲಿ ರೈಡ್; ಶಾಕಿಂಗ್‌ ‌ʼವಿಡಿಯೋ ವೈರಲ್ʼ | Watch

ನ್ಯೂಯಾರ್ಕ್ ನಗರದಲ್ಲಿ ಇಬ್ಬರು ಹದಿಹರೆಯದ ಹುಡುಗರು ಸಬ್‌ವೇ ರೈಲನ್ನು ಕದ್ದುಕೊಂಡು ಜಾಲಿ ರೈಡ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಕ್ವೀನ್ಸ್‌ನ ಫಾರೆಸ್ಟ್ ಹಿಲ್ಸ್-71 ಅವೆ ಸಬ್‌ವೇ ನಿಲ್ದಾಣದಲ್ಲಿ ಆರು ಜನರ ಗುಂಪಿನಲ್ಲಿದ್ದ ಈ ಇಬ್ಬರು ಹುಡುಗರು ಖಾಲಿ ಇದ್ದ R ರೈಲನ್ನು ಕದ್ದಿದ್ದಾರೆ. ಕಳ್ಳತನದ ನಂತರ ರೈಲಿನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ರೈಲು ಚಲಿಸುವಾಗ ಮುಖವಾಡ ಧರಿಸಿದ್ದ ಯುವಕರು ರೈಲಿನ ಚಾಲಕನ ಕ್ಯಾಬಿನ್‌ನಿಂದ ಹೊರಗೆ ಬರುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಅವರು ಬೋಗಿಯಲ್ಲಿ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಪೊಲೀಸರ ಪ್ರಕಾರ, ಯುವಕರು ತಮ್ಮ ಗುರುತು ಮರೆಮಾಚಲು ಭದ್ರತಾ ಕ್ಯಾಮೆರಾಗಳ ಲೆನ್ಸ್‌ಗಳಿಗೆ ಕಪ್ಪು ಮಾರ್ಕರ್‌ನಿಂದ ಬಣ್ಣ ಹಚ್ಚಲು ಪ್ರಯತ್ನಿಸಿದ್ದರು. ಆದರೆ, ಅವರು ತಮ್ಮ ರೈಡ್ ಅನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಸುಮಾರು 30 mph ವೇಗದಲ್ಲಿ ರೈಲು ಚಲಾಯಿಸಿದ್ದು, ನಂತರ ಶಂಕಿತರು ಕಾಲ್ನಡಿಗೆಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರ ರೈಡ್ ಎಷ್ಟು ಹೊತ್ತು ನಡೆಯಿತು ಎಂಬುದು ತಿಳಿದಿಲ್ಲ.

ಈ ಘಟನೆಗೆ ಸಂಬಂಧಿಸಿದಂತೆ 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ಹುಡುಗರನ್ನು ಬಂಧಿಸಲಾಗಿದೆ. ಒಬ್ಬನ ಮೇಲೆ ಅಪಾಯಕಾರಿ ಕೃತ್ಯ, ಕಳ್ಳತನದ ಉಪಕರಣಗಳನ್ನು ಹೊಂದಿದ್ದಕ್ಕಾಗಿ, ಕ್ರಿಮಿನಲ್ ಹಾನಿ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪದ ಮೇಲೆ ಬಂಧಿಸಲಾಗಿದೆ.

ಮತ್ತೊಬ್ಬನನ್ನು ಅಪಾಯಕಾರಿ ಕೃತ್ಯ, ಕ್ರಿಮಿನಲ್ ಹಾನಿ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ MTA ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಹೇಳಿಕೆ ಲಭ್ಯವಾಗಿಲ್ಲ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read