ಇಸ್ರೇಲ್ ಜತೆ ಸಂಘರ್ಷದ ನಡುವೆ ಇರಾನ್ ವಶಪಡಿಸಿಕೊಂಡ ಸರಕು ಹಡಗಿನಲ್ಲಿ 17 ಭಾರತೀಯರು

ದುಬೈ(ಯುಎಇ): ಇಸ್ರೇಲ್ ಜೊತೆಗಿನ ಉದ್ವಿಗ್ನತೆಯ ನಡುವೆ ಯುಎಇ ಕರಾವಳಿಯಲ್ಲಿ ಇರಾನ್ ವಶಪಡಿಸಿಕೊಂಡ ಸರಕು ಹಡಗಿನಲ್ಲಿದ್ದ 17 ಭಾರತೀಯರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುಎಇ ಕರಾವಳಿಯಲ್ಲಿ ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡ ಸರಕು ಹಡಗಿನಲ್ಲಿ 17 ಭಾರತೀಯ ಪ್ರಜೆಗಳು ಇದ್ದರು. ಇರಾನ್‌ನ ಅರೆಸೈನಿಕ ರೆವಲ್ಯೂಷನರಿ ಗಾರ್ಡ್‌ನ ಕಮಾಂಡೋಗಳು ಹೆಲಿಕಾಪ್ಟರ್‌ನಿಂದ ಇಸ್ರೇಲಿ-ಸಂಯೋಜಿತ ಕಂಟೈನರ್ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ಇಳಿದರು ಮತ್ತು ಹಡಗನ್ನು ಶನಿವಾರ ವಶಪಡಿಸಿಕೊಂಡರು.

“MSC ಏರೀಸ್” ಎಂಬ ಸರಕು ಸಾಗಣೆ ಹಡಗನ್ನು ಇರಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. 17 ಭಾರತೀಯ ಪ್ರಜೆಗಳಿದ್ದಾರೆ ಎಂದು ತಿಳಿದುಕೊಂಡಿದ್ದು, ಟೆಹ್ರಾನ್ ಮತ್ತು ದೆಹಲಿಯಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ಪ್ರಜೆಗಳ ಭದ್ರತೆ, ಕಲ್ಯಾಣ ಮತ್ತು ಆರಂಭಿಕ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಮಾಜಿ ಕಾನ್ಸುಲೇಟ್ ಮೇಲೆ ದಾಳಿ ನಡೆಸಿದ ನಂತರ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ಕಮಾಂಡೋಗಳು ಹೆಲಿಕಾಪ್ಟರ್ ಮೂಲಕ ಹಾರ್ಮುಜ್ ಜಲಸಂಧಿ ಬಳಿ ಹಡಗಿನ ಮೇಲೆ ದಾಳಿ ನಡೆಸಿದರು.

https://twitter.com/michaelh992/status/1779091223073927484

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read