BREAKING : ‘ಅಯೋಧ್ಯೆ’ಯಲ್ಲಿ 15,700 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ‘ಪ್ರಧಾನಿ ಮೋದಿ’

ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ 15,700 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು 11,100 ಕೋಟಿ ರೂ.ಗಳ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 4,600 ಕೋಟಿ ರೂ.ಗಳ ಯೋಜನೆಗಳು ಸೇರಿವೆ.

ಅಯೋಧ್ಯೆಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಗುರಿ: ಪ್ರಧಾನಿ ಮೋದಿ

ದೇಶದ ಹಲವಾರು ಸ್ಥಳಗಳಿಂದ ಅಯೋಧ್ಯೆಗೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ . ಅಯೋಧ್ಯೆಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಯೋಧ್ಯೆ ನಗರ ಹೊಸ ಅಭಿವೃದ್ದಿಗೆ ದಿಕ್ಸೂಚಿಯಾಗಲಿದೆ ಎಂದರು.

ಅಯೋಧ್ಯೆ ಧಾಮ್ ರೈಲ್ವೆ ನಿಲ್ದಾಣ ಮತ್ತು ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದ ನಂತರ ಮತ್ತು ಎಂಟು ಹೊಸ ರೈಲು ಮಾರ್ಗಗಳಿಗೆ ಹಸಿರು ನಿಶಾನೆ ತೋರಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

https://twitter.com/ANI/status/1741021702640054380?ref_src=twsrc%5Etfw%7Ctwcamp%5Etweetembed%7Ctwterm%5E1741021702640054380%7Ctwgr%5E0ff8245f466a502fb217ed90688b3db0b4e1a8fa%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fpm-launches-e282b915700-crore-worth-46-developmental-projects%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read