ಚಪಾತಿ ಜತೆ ಒಳ್ಳೆ ಕಾಂಬಿನೇಷನ್ ರುಚಿಕರ ಮೊಟ್ಟೆ ಕರ್ರಿ

ರೋಟಿ, ಚಪಾತಿ ಮಾಡಿದಾಗ ಸೈಡ್ ಡಿಶ್ ಗೆ ಏನಾದರೂ ಇದ್ದರೆ ಚೆನ್ನಾಗಿರುತ್ತದೆ. ಅದರಲ್ಲೂ ಮೊಟ್ಟೆ ಕರ್ರಿ ಇದ್ದರೆ ಕೇಳಬೇಕೆ…? ಇಲ್ಲಿ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಮೊಟ್ಟೆ ಕರ್ರಿ ಇದೆ. ಮನೆಯಲ್ಲಿ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿ

4- ಬೇಯಿಸಿದ ಮೊಟ್ಟೆ, 2 ಟೇಬಲ್ ಸ್ಪೂನ್- ಎಣ್ಣೆ, 1 ½ ಟೀ ಸ್ಪೂನ್- ಜೀರಿಗೆ, ¾ ಕಪ್– ಟೊಮೆಟೊ ಪ್ಯೂರಿ, ½ ಕಪ್- ನೀರು, ½ ಕಪ್- ಈರುಳ್ಳಿ ಕತ್ತರಿಸಿದ್ದು, 2- ಹಸಿಮೆಣಸು ಕತ್ತರಿಸಿದ್ದು, ½ ಟೀ ಸ್ಪೂನ್- ಅರಿಶಿನ, 1 ½ ಟೀ ಸ್ಪೂನ್- ಖಾರದ ಪುಡಿ, 2 ಟೀ ಸ್ಪೂನ್- ಧನಿಯಾ ಪುಡಿ, 1 ಟೀ ಸ್ಪೂನ್- ಗರಂ ಮಸಾಲ, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿಸೊಪ್ಪು- ಸ್ವಲ್ಪ.

ಮಾಡುವ ವಿಧಾನ

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಜೀರಿಗೆ ಸೇರಿಸಿ. ಇದು ಸಿಡಿಯುತ್ತಿದ್ದಂತೆ ಈರುಳ್ಳಿ, ಹಸಿಮೆಣಸು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ಆಮೇಲೆ ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ 1 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.

ಟೊಮೆಟೋ ಪ್ಯೂರಿ ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ನೀರು ಸೇರಿಸಿ ಒಂದು ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಮೊಟ್ಟೆ, ಕೊತ್ತಂಬರಿ ಸೊಪ್ಪು ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಮೊಟ್ಟೆ ಕರ್ರಿ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read