3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ

ಮೂರು ವರ್ಷದಲ್ಲಿ 135 ದೇಶಗಳು, 13 ಜಗತ್ತಿನ ಅದ್ಭುತ ಸ್ಥಳಗಳ ಪರ್ಯಟನೆ ಮಾಡುವ ಪ್ಯಾಕೇಜ್‌ ಅನ್ನು ಲೈಫ್​​ ಆ್ಯಟ್​ ಸೀ ಕ್ರೂಸಿಸ್​ ಘೋಷಣೆ ಮಾಡಿದೆ.

ಈ ಹಡುಗು ಮೂರು ವರ್ಷಗಳಲ್ಲಿ 135 ದೇಶಗಳಿಗೆ ಕರೆದುಕೊಂಡು ಹೋಗಿ ಬರುತ್ತದೆ. ಪ್ರಪಂಚಾದ್ಯಂತ ಮೂರು ವರ್ಷಗಳಲ್ಲಿ ಈ ಪ್ರಯಾಣ ಮಾಡಬಹುದಾಗಿದೆ. ಒಂದು ವರ್ಷಕ್ಕೆ ದರವನ್ನು ಕೂಡ ಇದು ನಿಗದಿ ಮಾಡಿದೆ. ಒಬ್ಬ ವ್ಯಕ್ತಿಗೆ 24.5 ಲಕ್ಷದಿಂದ 89.9 ಲಕ್ಷ ರೂಪಾಯಿವರೆಗೆ ಇರಲಿದೆ.

ಈ ಹಡಗು ಜಗತ್ತಿನ್ 14 ಅದ್ಭುತಗಳಲ್ಲಿ 13 ಅದ್ಭುತಗಳ ಸ್ಥಳಕ್ಕೆ ಭೇಟಿ ಕೊಡಲಿದೆ. ಇದರ ಹೆಸರು ಎಂವಿ ಜೆಮಿನಿ. 400 ಕ್ಯಾಬಿನ್​ ಹೊಂದಿದ್ದು, ಸಾವಿರಕ್ಕೂ ಅಧಿಕ ಕೋಣೆಗಳಿವೆ. ಊಟ, ವಸತಿ, ಸ್ವಿಮ್ಮಿಂಗ್​ಪೂಲ್​. ಇಂಟರ್ನೆಟ್ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ.

ಬರುವ ನವೆಂಬರ್​ 1ರಿಂದ ಇಸ್ತಾನ್​ಬುಲ್​ನಿಂದ ಇದು ಇದರ ಪ್ರಯಾಣ ಪ್ರಾರಂಭವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read