BREAKING: 1200 ಎಕರೆ ವಕ್ಫ್ ಬೋರ್ಡ್ ಗೆ ಇಂಡೀಕರಣ: ಆಸ್ತಿ ಹಕ್ಕು ನಿರ್ಣಯ ಮಾಡುವ ಹಕ್ಕು ಕಂದಾಯ ಅಧಿಕಾರಿಗಳಿಗೆ ಇಲ್ಲ: ವಿಜಯಪುರ ಡಿಸಿ ಮಾಹಿತಿ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ಇಂಡೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದು, ಯಾವುದೇ ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ, ಸರ್ಕಾರಿ ಸಂಸ್ಥೆಯವರು ಅವರ ಬಳಿಯ ಸೂಕ್ತ ದಾಖಲಾತಿ ಕಂದಾಯ ಇಲಾಖೆಗೆ ನೀಡಬೇಕು, ಸಂಬಂಧಿಸಿದವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ನಂತರ ಹಕ್ಕನ್ನು ಖಚಿತಪಡಿಸಿಕೊಂಡು ದಾಖಲಾತಿಗಳನ್ನು ಇಂಡೀಕರಣ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

1974ರಲ್ಲಿ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ವಕ್ಫ್ ಬೋರ್ಡ್ ಆಸ್ತಿಗಳ ಇಂಡೀಕರಣ ಮಾಡಲು ಕಂದಾಯ ಇಲಾಖೆಗೆ ಪಟ್ಟಿ ನೀಡಿದ್ದಾರೆ. ವಿಜಯಪುರ ಜಿಲ್ಲಾ ವಕ್ಫ್ ಅಧಿಕಾರಿಗಳು ಪಟ್ಟಿಯನ್ನು ನೀಡಿದ್ದು ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಕ್ರಿಯೆಗಾಗಿ ರೈತರಿಗೆ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ಗೆ ಭಯಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಧೈರ್ಯ ತುಂಬಿದ್ದಾರೆ.

ಸೂಕ್ತ ದಾಖಲಾತಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲು ಸಲಹೆ ನೀಡಿದ್ದಾರೆ. ದಾಖಲಾತಿಯನ್ನು ಆಧರಿಸಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಒಂದು ವೇಳೆ ತಹಶೀಲ್ದಾರ್ ನೋಟಿಸ್ ನೀಡದೆ ಇಂಡೀಕರಣ ಮಾಡಿದಲ್ಲಿ ರೈತರು, ಮಾಲೀಕರು, ಉಪ ವಿಭಾಗಾಧಿಕಾರಿಗೆ ನಂತರ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ನೋಟಿಸ್ ಬಂದ ಕೂಡಲೇ ಯಾರ ಹಕ್ಕುಗಳು ತಕ್ಷಣ ಬದಲಾವಣೆಯಾಗುವುದಿಲ್ಲ. ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read