ಸುರಕ್ಷಿತವಾಗಿದೆ 12 ಸಾವಿರ ವರ್ಷಗಳಷ್ಟು ಹಳೆಯ ಮೆದುಳು……! ವಿಜ್ಞಾನಿಗಳ ಅಚ್ಚರಿಯ ಆವಿಷ್ಕಾರದಲ್ಲಿ ಬಯಲಾಗಲಿದೆ ರಹಸ್ಯ…..!!

ಮೆದುಳು ನಮ್ಮ ದೇಹದ ಅತ್ಯಂತ ಪ್ರಮುಖವಾದ ಅಂಗ. ಒಬ್ಬ ವ್ಯಕ್ತಿಯು ಸತ್ತ ನಂತರ ಅವನ ಮೆದುಳು ಮೊದಲು ಕೊಳೆಯುತ್ತದೆ ಎಂದು ನಂಬಲಾಗಿದೆ. ಆದರೆ ಸಾವಿರಾರು ವರ್ಷಗಳವರೆಗೆ ಮೆದುಳನ್ನು ನೈಸರ್ಗಿಕವಾಗಿ ಸಂರಕ್ಷಿಸಿ ಇಡಬಹುದು. ಅಷ್ಟೇ ಅಲ್ಲ ಇಷ್ಟು ಪುರಾತನ ಮೆದುಳು ಅನೇಕ ಪ್ರಮುಖ ಮಾಹಿತಿಯನ್ನು ಒದಗಿಸಬಲ್ಲದು. ಹೊಸ ಅಧ್ಯಯನವೊಂದರಲ್ಲಿ ಈ ಅಚ್ಚರಿಯ ಸಂಗತಿ ಬಯಲಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ  ಪ್ರಪಂಚದಾದ್ಯಂತದ ಪುರಾತತ್ವ ಶಾಸ್ತ್ರದ ದಾಖಲೆಯಲ್ಲಿ ಸಂರಕ್ಷಿತ ಮಾನವ ಮೆದುಳುಗಳನ್ನು ಪತ್ತೆ ಮಾಡಿದೆ. ಇವುಗಳಲ್ಲಿ ಕೆಲವು ಮೆದುಳುಗಳು 12 ಸಾವಿರ ವರ್ಷಗಳಿಗಿಂತಲೂ ಹೆಚ್ಚು ಹಳೆಯವು. ಅಧ್ಯಯನದಲ್ಲಿ ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಸಂರಕ್ಷಿತ ಮೆದುಳುಗಳನ್ನು ಗುರುತಿಸಲಾಗಿದೆ.

ಮೆದುಳು ಸಾವಿನ ನಂತರ ಮೊದಲು ಕೊಳೆಯಲು ಪ್ರಾರಂಭಿಸುತ್ತದೆ ಎಂಬ ನಂಬಿಕೆಯಿತ್ತು. ಆದರೆ ಈ ಹೊಸ ಆವಿಷ್ಕಾರ ಇದನ್ನು ಸುಳ್ಳಾಗಿಸಿದೆ. ಸಂರಕ್ಷಿತ ಮಿದುಳುಗಳ ಆವಿಷ್ಕಾರವು ಮಾನವ ಇತಿಹಾಸ ಮತ್ತು ರೋಗಗಳನ್ನು ಅರ್ಥಮಾಡಿಕೊಳ್ಳಲು ಹೊಸ ಅವಕಾಶ ಮಾಡಿಕೊಟ್ಟಿದೆ.

ಫೋರೆನ್ಸಿಕ್‌ ತಜ್ಞರ ಪ್ರಕಾರ ಕೂಡ ಮರಣದ ನಂತರ ಕೊಳೆಯುವ ಮೊದಲ ಅಂಗಗಳಲ್ಲಿ ಮೆದುಳು ಒಂದಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಮೆದುಳು ಸುರಕ್ಷಿತವಾಗಿ ಉಳಿಯುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ. ಪುರಾತನ ಮೆದುಳುಗಳಲ್ಲಿ ಸಂರಕ್ಷಿಸಲಾದ ಅದ್ಭುತ ಸಂಖ್ಯೆಗಳು ಮತ್ತು ಜೈವಿಕ ಅಣುಗಳ ಪ್ರಕಾರಗಳನ್ನು ವಿಜ್ಞಾನಿಗಳು ಶೋಧಿಸುತ್ತಿದ್ದಾರೆ. ಪೂರ್ವಜರ ಜೀವನ ಮತ್ತು ಸಾವಿನ ಬಗ್ಗೆ ಕೂಡ ಇದರಲ್ಲಿ ಮಾಹಿತಿ ಸಿಗಬಹುದು.

ದೇಹದ ಮೃದು ಅಂಗಾಂಶ ನೈಸರ್ಗಿಕವಾಗಿಯೇ ಸಂರಕ್ಷಣೆ ಪಡೆದು ಸುರಕ್ಷಿತವಾಗಿರುವುದು ಅಪರೂಪದ ಘಟನೆಯಾಗಿದೆ. ಈ ಸಂಗ್ರಹವು ಸುಮಾರು 12 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಮನಸ್ಸುಗಳ ಸಮಗ್ರ, ವ್ಯವಸ್ಥಿತ ಪರಿಶೋಧನೆಯ ಮೊದಲ ಹೆಜ್ಜೆಯಾಗಿದೆ. ಮೆದುಳು ದೇಹದ ಚಯಾಪಚಯ ಕ್ರಿಯೆಯ ಅಂಗವಾಗಿರುವುದರಿಂದ ಮತ್ತು ಅತ್ಯಂತ ವಿರಳವಾಗಿ ಸಂರಕ್ಷಿಸಲ್ಪಟ್ಟ ಮೃದು ಅಂಗಾಂಶಗಳಲ್ಲಿ ಒಂದಾಗಿರುವುದರಿಂದ ಈ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read