ರಷ್ಯಾದಲ್ಲಿ ಸಿಲುಕಿದ ಯುವಕರ ಸುರಕ್ಷಿತವಾಗಿ ಕರೆತರಲು ವಿದೇಶಾಂಗ ಸಚಿವರಿಗೆ ಖರ್ಗೆ ಪತ್ರ

ನವದೆಹಲಿ: ರಷ್ಯಾದಲ್ಲಿ ಸಿಲುಕಿರುವ ಮೂವರು ಯುವಕರ ರಕ್ಷಣೆಗೆ ಕೋರಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರೆ.

ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾದಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಂತೆ ಪತ್ರ ಬರೆದಿದ್ದಾರೆ. ರಷ್ಯಾದಲ್ಲಿ ಸಿಲುಕಿದ ದೇಶದ ಎಲ್ಲ ಯುವಕರನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಉದ್ಯೋಗದ ಭರವಸೆ ನೀಡಿ ಏಜೆಂಟರ ವಂಚನೆಗೆ ಒಳಗಾಗಿ ರಷ್ಯಾಗೆ ತೆರಳಿದ್ದ 12 ಭಾರತೀಯ ಯುವಕರನ್ನು ಉಕ್ರೇನ್ ವಿರುದ್ಧದ ಯುದ್ದಕ್ಕೆ ಕಳುಹಿಸಲಾಗಿದೆ. 12 ಮಂದಿ ಯುವಕರ ಪೈಕಿ ಮೂವರು ಕಲಬುರಗಿಯವರು. 12 ಮಂದಿ ಯುವಕರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಬೇಕು ಎಂದು ಒತ್ತಾಯಿಸಿದ್ದಾರೆ.

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು, ರಷ್ಯಾದಲ್ಲಿ ಸಿಲುಕಿದವರಲ್ಲಿ ಕರ್ನಾಟಕ, ತೆಲಂಗಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ಯುವಕರು ಸೇರಿದ್ದಾರೆ. ಪ್ರಧಾನಿ ಜೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ರಷ್ಯಾದೊಂದಿಗೆ ಮಾತುಕತೆ ನಡೆಸಿ ಯುವಕರನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read