ಪೊಲೀಸ್ ಠಾಣೆಯಲ್ಲೇ ಬಾಂಬ್ ಸ್ಫೋಟ: 12 ಪೊಲೀಸರ ಹತ್ಯೆ

ಪಾಕಿಸ್ತಾನದ ಸ್ವಾತ್‌ ನಲ್ಲಿರುವ ಭಯೋತ್ಪಾದನಾ ನಿಗ್ರಹ ಇಲಾಖೆ(CTD) ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಸ್ಫೋಟಗಳಲ್ಲಿ ಕನಿಷ್ಠ 12 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪೊಲೀಸ್ ಠಾಣೆಯೊಳಗೆ ಸಂಭವಿಸಿದ ಎರಡು ಸ್ಫೋಟಗಳಿಂದ ಕಟ್ಟಡ ನಾಶವಾಗಿದೆ. ಭದ್ರತಾ ಅಧಿಕಾರಿಗಳು ಪ್ರಾಂತ್ಯದಾದ್ಯಂತ ಹೆಚ್ಚಿನ ಅಲರ್ಟ್ ನಲ್ಲಿದ್ದಾರೆ ಎಂದು ಖೈಬರ್ ಪಖ್ತುಂಕ್ವಾ ಪೊಲೀಸ್ ಮಹಾನಿರೀಕ್ಷಕ ಅಖ್ತರ್ ಹಯಾತ್ ಖಾನ್ ಹೇಳಿದ್ದಾರೆ.

CTD ಡಿಐಜಿ ಖಾಲಿದ್ ಸೊಹೈಲ್ ಜಿಯೋ ನ್ಯೂಸ್‌ಗೆ ಸ್ಪೋಟವು ಆತ್ಮಹತ್ಯಾ ದಾಳಿಯಲ್ಲ. ಮದ್ದುಗುಂಡುಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ಸಂಗ್ರಹಿಸಿದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸ್ ಠಾಣೆ ಮೇಲೆ ಯಾವುದೇ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ. ಸ್ಫೋಟದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಪ್ರಕರಣದ ತನಿಖೆಗಾಗಿ ಬಾಂಬ್ ನಿಷ್ಕ್ರಿಯ ದಳಗಳು ಸ್ಫೋಟದ ಸ್ಥಳದಲ್ಲಿವೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read