ಗುರುವಾರ ನೈಋತ್ಯ ಚೀನಾದಲ್ಲಿ ರೈಲು ಕಾರ್ಮಿಕರಿಗೆ ಹೊಡೆದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಈ ಘಟನೆ ದೇಶದ ಯುನ್ನಾನ್ ಪ್ರಾಂತ್ಯದಲ್ಲಿ ನಡೆದಿದೆ. ಕುನ್ಮಿಂಗ್ ರೈಲ್ವೆ ಬ್ಯೂರೋದ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದ್ದು, “ಭೂಕಂಪನ ಉಪಕರಣಗಳ ಪರೀಕ್ಷೆಗೆ ಬಳಸಲಾಗುತ್ತಿದ್ದ” ರೈಲು ಇಂದು ಮುಂಜಾನೆ ಕುನ್ಮಿಂಗ್‌ನ ಲುಯೊಯಾಂಗ್ ಟೌನ್ ನಿಲ್ದಾಣದಲ್ಲಿ ನಿರ್ಮಾಣ ಕಾರ್ಮಿಕರೊಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದೆ.
