108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್ ಅಂಬಾನಿ ಮತ್ತೆ ದಪ್ಪಗಾಗಿದ್ದು ಹೇಗೆ……? 

ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥ ಇತ್ತೀಚೆಗಷ್ಟೆ ನೆರವೇರಿದೆ.  ರಾಧಿಕಾ ಮರ್ಚೆಂಟ್ ಜೊತೆ ಅನಂತ್‌ ಎಂಗೇಜ್‌ ಆಗಿದ್ದಾರೆ. ಮುಂಬೈನ ಅಂಬಾನಿ ನಿವಾಸದಲ್ಲಿ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭಕ್ಕೆ ಸೆಲೆಬ್ರಿಟಿಗಳೆಲ್ಲ ಆಗಮಿಸಿದ್ದರು. ಈ ಹಿಂದೆ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದ ಅನಂತ್‌ ಅಂಬಾನಿ ಮತ್ತೆ ದಪ್ಪಗಾಗಿರೋದು ನಿಶ್ಚಿತಾರ್ಥದ ಫೋಟೋ ಮತ್ತು ವಿಡಿಯೋಗಳಲ್ಲಿ ಗೋಚರಿಸಿದೆ. ಕೆಲ ವರ್ಷಗಳ ಹಿಂದೆ 108 ಕೆಜಿ ತೂಕ ಇಳಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದ ಅನಂತ್‌ ಮತ್ತೆ ದಪ್ಪಗಾಗಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಅನಂತ್ ಅಂಬಾನಿಗೆ ಅಸ್ತಮಾ ಸಮಸ್ಯೆ ಇದೆ ಎಂದು ತಾಯಿ ನೀತಾ ಅಂಬಾನಿ ಹಿಂದೊಮ್ಮೆ ಹೇಳಿದ್ದರು. ಅದಕ್ಕಾಗಿಯೇ ಅನಂತ್‌ ಸಾಕಷ್ಟು ಸ್ಟೀರಾಯ್ಡ್‌ ತೆಗೆದುಕೊಳ್ಳಬೇಕಾಗಿ ಬಂದಿತ್ತಂತೆ. ಸ್ಟಿರಾಯ್ಡ್‌ಗಳಿಂದಾಗಿ ಅನಂತ್‌ ವಿಪರೀತ ದಪ್ಪಗಾಗಿದ್ದಾರೆ ಅಂತಾ ನೀತಾ ಅಂಬಾನಿ ವಿವರಿಸಿದ್ದರು. ಈ ಹಿಂದೆ ಅನಂತ್ ತೂಕ ಸುಮಾರು 208 ಕೆಜಿ ಇತ್ತು. ಸಾಕಷ್ಟು ವ್ಯಾಯಾಮ ಮತ್ತು ಡಯಟ್‌ ಮೂಲಕ ಅನಂತ್‌ 18 ತಿಂಗಳುಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದರು. 2016 ರಲ್ಲಿ ಅನಂತ್ ಅಂಬಾನಿ ಅವರ ದೇಹ ರೂಪಾಂತರವು ಎಲ್ಲರನ್ನು ಆಶ್ಚರ್ಯಗೊಳಿಸಿತ್ತು. ಇದರಿಂದ ಅನೇಕರು ಸ್ಫೂರ್ತಿ ಪಡೆದಿದ್ದರು. 18 ತಿಂಗಳಲ್ಲಿ ಸುಮಾರು 108 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ತಾಯಿ ನೀತಾ ಅಂಬಾನಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರತಿದಿನ 21 ಕಿಲೋಮೀಟರ್ ನಡಿಗೆ, ವೇಯ್ಟ್‌ ಟ್ರೇನಿಂಗ್‌, ಯೋಗ, ಕ್ರಿಯಾತ್ಮಕ ತರಬೇತಿ ಮತ್ತು ಹೆಚ್ಚಿನ ತೀವ್ರತೆಯ ವ್ಯಾಯಾಮವನ್ನು ಅನಂತ್‌ ಮಾಡುತ್ತಿದ್ದರು ಅನಂತ್ ಪ್ರತಿದಿನ 5-6 ಗಂಟೆಗಳ ಕಾಲ ವ್ಯಾಯಾಮ ಮಾಡುವ ಮೂಲಕ ಹೆಚ್ಚುವರಿ ಕೊಬ್ಬನ್ನು ಕರಗಿಸಿದ್ದರು. ತೂಕ ಇಳಿಸುವ ಸಮಯದಲ್ಲಿ ಅನಂತ್ ಅವರ ಆಹಾರದಲ್ಲಿ ತಾಜಾ ಹಸಿರು ತರಕಾರಿಗಳು, ಬೇಳೆ ಕಾಳುಗಳು, ಮತ್ತು ಡೈರಿ ಉತ್ಪನ್ನಗಳನ್ನೇ ಬಳಸಲಾಗುತ್ತಿತ್ತು. ಆ ಸಮಯದಲ್ಲಿ ಅನಂತ್ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿದ್ದರು.ಆದ್ರೀಗ ಮತ್ತೆ ತೂಕ ಹೆಚ್ಚಿರುವುದರ ಹಿಂದೆ ಕೆಲವು ಔಷಧಿಗಳ ಅತಿಯಾದ ಬಳಕೆಯೇ ಕಾರಣವಿರಬಹುದೆಂದು ಹೇಳಲಾಗುತ್ತಿದೆ. ಇದಲ್ಲದೆ ಕೆಟ್ಟ ಜೀವನ  ಶೈಲಿ, ಜಂಕ್‌ ಫುಡ್‌ಗಳ ಸೇವನೆ ಕೂಡ ತೂಕ ಹೆಚ್ಚಾಗಲು ಕಾರಣವಾಗಿರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read