‘ವೋಗ್’ ಫಿಲಿಪೈನ್ಸ್ ಮ್ಯಾಗಜೀನ್ ಕವರ್ ಪೇಜ್ ನಲ್ಲಿ 106 ವರ್ಷದ ಹಿರಿಯ ಟ್ಯಾಟೂ ಕಲಾವಿದೆ

ಮಾಸಪತ್ರಿಕೆಗಳಿಗೆ ಯುವ ಮಾಡೆಲ್ ಗಳು, ನಟಿಯರ ಫೋಟೋಗಳನ್ನು ಕವರ್ ಪೇಜ್ ನಲ್ಲಿ ಬಳಸೋದು ಸಾಮಾನ್ಯ. ಆದರೆ ವಿಶ್ವದ ಖ್ಯಾತ ಮ್ಯಾಗಜೀನ್ ವೋಗ್ ಫಿಲಿಪೈನ್ಸ್ ತನ್ನ ಏಪ್ರಿಲ್ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿನ ಕವರ್ ಪೇಜ್ ಹುಬ್ಬೇರಿಸಿದೆ. ‌

ಅದರಲ್ಲಿ 106 ವರ್ಷದ ಸ್ಥಳೀಯ ಕಳಿಂಗ ಮಹಿಳೆಯಾದ ಅಪೋ ವಾಂಗ್-ಓಡ್ ಅವರಿದ್ದಾರೆ. ಅವರನ್ನು ಮಾರಿಯಾ ಒಗ್ಗೇ ಎಂದೂ ಸಹ ಕರೆಯುತ್ತಾರೆ.

ಫಿಲಿಪೈನ್ಸ್ ನ 106 ವರ್ಷದ ಟ್ಯಾಟೂ ಕಲಾವಿದೆ ಅಪೋ ವಾಂಗ್-ಓಡ್ ವೋಗ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ಮಹಿಳೆಯಾಗಿದ್ದಾರೆ.

ಅವರು ಹದಿಹರೆಯದ ವಯಸ್ಸಿನಲ್ಲಿದ್ದಾಗಿನಿಂದ ತನ್ನ ತಂದೆಯ ಸೂಚನೆಯ ಮೇರೆಗೆ ಕೈಯಿಂದ ಹಚ್ಚೆ ಹಾಕುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಕಳಿಂಗ ಪ್ರಾಂತ್ಯದ ಮನಿಲಾದಿಂದ ಉತ್ತರಕ್ಕಿರುವ ಬುಸ್ಕಲಾನ್ ಎಂಬ ಪರ್ವತ ಹಳ್ಳಿಯಲ್ಲಿ ವಾಸಿಸುವ ಆಕೆಯನ್ನು ದೇಶದ ಅತ್ಯಂತ ಹಳೆಯ ‘ಮಂಬಾಬಾಟೊಕ್’ ಅಥವಾ ಸಾಂಪ್ರದಾಯಿಕ ಕಳಿಂಗ ಟ್ಯಾಯೂಯಿಸ್ಟ್ ಎಂದು ಪರಿಗಣಿಸಲಾಗಿದೆ.

ವೋಗ್ ಫಿಲಿಪೈನ್ಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೋಗ್‌ನ ಏಪ್ರಿಲ್ ಸಂಚಿಕೆಯ ಮುಖಪುಟವನ್ನು ಹಂಚಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read