BREAKING : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮದುವೆ ಮಂಟಪದಲ್ಲಿ ಬೆಂಕಿ ಬಿದ್ದು 100 ಮಂದಿ ಸಾವು

ಇರಾಕ್: ಉತ್ತರ ಇರಾಕ್ ನ ಮದುವೆ ಮಂಟಪದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇರಾಕ್ನ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲಿ) ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ಈ ದುರಂತ ಸಂಭವಿಸಿದೆ.

ಮದುವೆಯಲ್ಲಿ ಸುಮಾರು 700 ಜನರು ಭಾಗಿಯಾಗಿದ್ದರು. ಈ ವೇಳೆ ಖುಷಿಯಲ್ಲಿದ್ದ ಕುಟುಂಬ ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿ ಮದುವೆ ಮಂಟಪಕ್ಕೆ ಬಿದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಮದುವೆಯ ಹಾಲ್ ಗೆ ಹಬ್ಬಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read