ಡೆಹ್ರಾಡೂನ್ ನಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. 10 ಮಂದಿ ಕಾರ್ಮಿಕರು ಟ್ರಾಕ್ಟರ್ ಸಮೇತ ಕೊಚ್ಚಿ ಹೋಗಿದ್ದು, ಭಯಾನಕ ವೀಡಿಯೋ ವೈರಲ್ ಆಗಿದೆ
.ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ ಭಾರೀ ಮಳೆಯ ನಡುವೆ, ಟನ್ಸ್ ನದಿಯಲ್ಲಿ ಸಿಲುಕಿ ಜನರ ಗುಂಪೊಂದು ಕೊಚ್ಚಿ ಹೋಗುತ್ತಿರುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಈ ದುರಂತ ಘಟನೆಯಲ್ಲಿ ಕನಿಷ್ಠ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವೀಡಿಯೊದಲ್ಲಿ, ಉಕ್ಕಿ ಹರಿಯುವ ನದಿಯಲ್ಲಿ ಸಿಲುಕಿಕೊಂಡಿದ್ದ ಟ್ರ್ಯಾಕ್ಟರ್ನಲ್ಲಿ 10 ಕಾರ್ಮಿಕರ ಗುಂಪೊಂದು ಕಾಣಿಸಿಕೊಂಡಿದೆ. ಅವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಏತನ್ಮಧ್ಯೆ, ಕೆಲವು ಜನರು ನದಿಯ ದಡದಲ್ಲಿ ನಿಂತು ಸಿಲುಕಿಕೊಂಡ ಕಾರ್ಮಿಕರಿಗೆ ಹೇಗೆ ಸಹಾಯ ಮಾಡಬೇಕೆಂದು ಯೋಚಿಸುತ್ತಿದ್ದರು.ಆದರೆ ಯಾರಿಗೂ ಕೂಡ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ನೋಡ ನೋಡುತ್ತಿದ್ದಂತೆ ಎಲ್ಲರೂ ಕೊಚ್ಚಿಕೊಂಡು ಹೋಗಿದ್ದಾರೆ.
HAPPENING NOW: A devastating cloudburst triggered a dangerous rise in the river, sweeping away several people in a tractor-trolley. Authorities are on high alert as rescue operations continue in Vikasnagar, Dehradun, Uttarakhand, india. pic.twitter.com/eRE5sGT8GH
— Weather Monitor (@WeatherMonitors) September 16, 2025