ಹೈಡ್ರೋಸೆಲ್‌ ಆಪರೇಷನ್‌ಗೆ ಬಂದಿದ್ದವನಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ; ವೈದ್ಯರ ನಿರ್ಲಕ್ಷ್ಯಕ್ಕೆ ಯುವಕನ ಮದುವೆ ಕನಸು ಭಗ್ನ….!

ಬಿಹಾರದ ಚೈನ್‌ಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕ ಪುರುಷತ್ವವನ್ನೇ ಕಳೆದುಕೊಂಡಿದ್ದಾನೆ. ಹೈಡ್ರೋಸಿಲ್‌ ಶಸ್ತ್ರಚಿಕಿತ್ಸೆಗೆ ಬಂದಿದ್ದ ಯುವಕನಿಗೆ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಬಿಟ್ಟಿದ್ದಾನೆ. ಈಗ ಚೈನ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಕುಟುಂಬಸ್ಥರು ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಜಾಗರಿಯಾ ಗ್ರಾಮದ ರಾಮ್ ದಹಿನ್ ಸಿಂಗ್ ಯಾದವ್ ಅವರ ಪುತ್ರ ಮಂಕ ಯಾದವ್‌ಗೆ ಹೈಡ್ರೋಸಿಲ್ ಸಮಸ್ಯೆ ಇತ್ತು. ವೃಷಣದಲ್ಲಿ ಚೀಲದಂತೆ ಹೆಚ್ಚುವರಿಯಾಗಿ ಮಾಂಸ ಬೆಳೆದಿತ್ತು. ಅದನ್ನು ತೆಗೆದು ಹಾಕಲು ಚಿಕಿತ್ಸೆಗಾಗಿ ಆತ ಬಂದಿದ್ದ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಬಹುದು ಎಂಬ ಭರವಸೆಯಲ್ಲಿ ಚೈನ್‌ಪುರ ಹಾಸ್ಪಿಟಲ್‌ಗೆ ದಾಖಲಾಗಿದ್ದ.

ವೈದ್ಯರು ಆತನಿಗೆ ಹೈಡ್ರೋಸಿಲ್ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಆದರೆ ಸಂತಾನಹರಣ ಆಪರೇಶನ್‌ ಮಾಡಿಬಿಟ್ಟಿದ್ದಾರೆ. ಈ ವಿಚಾರ ತಿಳಿದ ಯುವಕನ ಕುಟುಂಬಸ್ಥರು ಬೆಚ್ಚಿಬಿದ್ದರು. ಮಗನಿಗೆ ಮದುವೆ ಮಾಡಬೇಕೆಂಬ ಕನಸು ಹೊತ್ತಿದ್ದ ಪೋಷಕರೀಗ ಕಂಗಾಲಾಗಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read