ಹೆಡಗೇವಾರ್ ತರಹದ ರಣಹೇಡಿಗಳ ಪಾಠ ಶಾಲಾ ಪಠ್ಯದಲ್ಲಿರಲು ಬಿಡುವುದಿಲ್ಲ: ಹರಿಪ್ರಸಾದ್ ಗುಡುಗು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ತರಹದ ರಣಹೇಡಿಗಳ ಪಾಠ, ಶಾಲಾ ಪಠ್ಯದಲ್ಲಿರಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಗುಡುಗಿದ್ದಾರೆ.

ಗುರುವಾರದಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಕೃಷಿ, ಕಾರ್ಮಿಕ, ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳನ್ನು ಸಂಪೂರ್ಣವಾಗಿ ಕೇಸರಿಕರಣ ಮಾಡಲು ಹೊರಟಿತ್ತು ಎಂದು ಆರೋಪಿಸಿದರು.

ಹೆಡೆಗೇವಾರ್ ಸ್ವಾತಂತ್ರ ಹೋರಾಟಗಾರರು ಎಂಬುದನ್ನು ಬಿಜೆಪಿಯವರು ನಿರೂಪಿಸಲಿ ಎಂದು ಸವಾಲು ಹಾಕಿದ ಬಿ.ಕೆ. ಹರಿಪ್ರಸಾದ್, ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಹೋರಾಟಗಾರರಿಗೆ ಮನ್ನಣೆ ನೀಡಲು ಸಾಧ್ಯವಿಲ್ಲ. ಸಂಘ ಪರಿವಾರದ ತತ್ವ ಸಿದ್ಧಾಂತಗಳನ್ನು ತುರುಕಲು ನಡೆದಿದ್ದ ಪ್ರಯತ್ನಗಳನ್ನು ಸರಿಪಡಿಸುವ ಕೆಲಸ ನಾವು ಮಾಡಲಿದ್ದೇವೆ ಎಂದು ಹೇಳಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read