ಹೃದಯದ ಆರೋಗ್ಯಕ್ಕೆ ಪ್ರಯೋಜನ ʼಡ್ರಾಗನ್ ಫ್ರೂಟ್ʼ

Image result for benefits of dragon fruit

ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ತಿಳಿಯೋಣ.

* ಡ್ರಾಗನ್ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯಕ್ಕೆ ಪ್ರಯೋಜನವಾಗುವಂತೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಪುನಃ ಸ್ಥಾಪಿಸಲು ನೆರವಾಗುತ್ತದೆ.

* ಜೀರ್ಣಕಾರಿ ತೊಂದರೆಗಳಿಂದ ಬಳಲುತ್ತಿದ್ದರೆ, ಈ ಹಣ್ಣುಗಳನ್ನು ತಿನ್ನಬಹುದು. ಇದರಲ್ಲಿರುವ ಫೈಬರ್ ಅಂಶ ಕಳಪೆ ಜೀರ್ಣಕ್ರಿಯೆ ಮತ್ತು ಮಲಬದ್ಧತೆಗೆ ನೆರವಾಗಬಲ್ಲದು. ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು.

* ಡ್ರಾಗನ್ ಹಣ್ಣು ಕ್ಯಾಲ್ಸಿಯಂ, ಫಾಸ್ಫರಸ್, ಐರನ್, ಪ್ರೋಟೀನ್ ಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

* ವಿಶೇಷವಾಗಿ ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಈ ಹಣ್ಣಿನಲ್ಲಿ ಇರುವುದರಿಂದ ಮೂಳೆಯ ರಚನೆ ನಿರ್ವಹಿಸಲು ಸಹಾಯ ಮಾಡುತ್ತದೆ.

* ತೀವ್ರ ಕಿರಿಕಿರಿ ಮತ್ತು ನಿಶ್ಚಲತೆ ಮುಂತಾದ ಸಂಧಿವಾತ ತೊಡಕುಗಳನ್ನು ಸರಾಗಗೊಳಿಸುವ ಶಕ್ತಿ ಈ ಹಣ್ಣಿಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read