ಹೂ ಮುಡಿದುಕೊಂಡು ಸಂಭ್ರಮಿಸಿದ ವಿದೇಶಿ ಪತ್ರಕರ್ತೆ; ವಿಡಿಯೋ ವೈರಲ್

ಭಾರತೀಯ ಸಂಸ್ಕೃತಿಯ ಬಗ್ಗೆ ಮಾರುಹೋಗದವರೇ ಯಾರೂ ಇಲ್ಲ. ಅದರಲ್ಲೂ ವಿದೇಶದಿಂದ ಬರುವ ಪ್ರವಾಸಿಗರು, ಇಲ್ಲಿ ತಯಾರಿಸಲಾಗುವ ವಿಶೇಷ ಬಗೆಯ ಖಾದ್ಯ, ಆಚಾರ, ವಿಚಾರ, ಸಂಪ್ರದಾಯ ಇವೆಲ್ಲವನ್ನ ನೋಡಿ ಮೂಕವಿಸ್ಮಿತರಾಗಿ ಬಿಡ್ತಾರೆ. ಅದರಲ್ಲೂ ಇಲ್ಲಿನ ಉಡುಗೆ ತೊಡುಗೆಗಳು ವಿದೇಶಿಯರಿಗೆ ಮೋಸ್ಟ್ ಫೇವರೇಟ್ ಆಗ್ಹೋಗಿರುತ್ತೆ.

ಸೋಶಿಯಲ್ ಮೀಡಿಯಾದಲ್ಲಿ, ಆ ಮಾತು ಸತ್ಯ ಅನ್ನೋದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದು ವೈರಲ್ ಆಗಿದೆ. ಅಲೆಕ್ಸ್ ಔಟ್‌ವೈಟ್ ಯುಕೆಯ ಪ್ರಸಿದ್ಧ ಪತ್ರಕತೆ೯. ಆಕೆ ವಿಶೇಷ ವರದಿಯೊಂದಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಕೆಲಸದ ನಿಮಿತ್ತ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಗೆ ಭೇಟಿಕೊಟ್ಟಾಗ, ಅಲ್ಲಿನ ಮಹಿಳೆಯರು ತಲೆಗೆ ಮುಡಿದಿದ್ದ ಹೂವು ಆಕೆಯನ್ನ ಆಕರ್ಷಿಸಿತ್ತು.

ತಕ್ಷಣವೇ ಅಲ್ಲೇ ಇದ್ದ ಹೂವಿನ ಮಾರುಕಟ್ಟೆಗೆ ಹೋಗಿ, ಅಲ್ಲಿ ಹೂವಿನ ವ್ಯಾಪಾರಿಯೊಂದಿಗೆ ಸ್ನೇಹ ಬೆಳಸಿ ಆಕೆ, ತನಗೂ ಆ ರೀತಿ ಹೂವನ್ನ ಮುಡಿಸುವುದಕ್ಕೆ ಕೇಳಿಕೊಂಡಳು. ತಡ ಮಾಡದ ಹೂವು ಮಾರುವಾಕೆ ನಗ್ತಾ ನಗ್ತಾ ಆಕೆ ಕೂದಲಿಗೆ ಹೂವನ್ನ ಸುಂದರವಾಗಿ ಮುಡಿಸುತ್ತಾಳೆ ಅದೇ ಸಮಯದಲ್ಲಿ ಅಲ್ಲೇ ಇದ್ದ ಅಲೆಕ್ಸ್ ಗೆಳೆಯ, ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇಲ್ಲಿ ಅಲೆಕ್ಸ್ ಹೂವು ಮುಡಿದ ಕ್ಷಣದಲ್ಲಿ ಎಷ್ಟು ಖುಷಿಯಾಗಿದ್ದಳು ಅನ್ನೊದನ್ನ ಗಮನಿಸಬಹುದು.

ಇದೇ ವಿಡಿಯೋವನ್ನ ಅಲೆಕ್ಸ್ ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಇದೇ ವಿಡಿಯೋ ಶೀರ್ಷಿಕೆಯಲ್ಲಿ ನವೆಂಬರ್‌ನಲ್ಲಿ ನಾನು ದಕ್ಷಿಣ ಭಾರತದಲ್ಲಿ ಏನಿಲ್ಲ ಅಂದರೂ ಒಂದು ತಿಂಗಳು ಕಳೆದಿದ್ದೇನೆ. ಅದರಲ್ಲೂ ತಮಿಳುನಾಡು ಹತ್ತು ಹಲವಾರು ವಿಶೇಷತೆಗಳಿಂದ ಕೂಡಿದೆ. ಮೈಲುಗಳುದ್ದ ಕರಾವಳಿ, ಗಿರಿಧಾಮಗಳು ಮತ್ತು ಚಹಾ ತೋಟಗಳು, ಇದೆಲ್ಲದರ ಜೊತೆಗೆ ಹಳೆಯ ದೇವಾಲಯಗಳು ತಮಿಳುನಾಡಿನಲ್ಲಿ ನೋಡಬಹುದು. ಇದೇ ತಮಿಳುನಾಡಿನಲ್ಲಿ ನನಗೆ ಹೊಸ ಹೊಸ ಗೆಳೆಯರಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

https://twitter.com/AlexOuthwaite/status/1625542202771357699?ref_src=twsrc%5Etfw%7Ctwcamp%5Etweetembed%7Ctwterm%5E1625542202771357699%7Ctwgr%5E29ffb46a2e2d180ba35e81b0b22e0654360444e1%7Ctwcon%5Es1_&ref_url=https%3A%2F%2Fwww.firstpost.com%2Findia%2Fuk-journalist-becomes-friends-with-flower-seller-in-tamil-nadu-video-wins-internet-12165772.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read