ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಕ್ಕೆ ಹೌದು ಹುಲಿಯಾ! ಕರ್ನಾಟಕಕ್ಕೆ ಒಬ್ಬರೇ ಹುಲಿ ಅದು ಸಿದ್ದರಾಮಯ್ಯ ಎಂದ ಅಭಿಮಾನಿಗಳು…

ಬೆಂಗಳೂರು: ಅಂತರಾಷ್ಟ್ರೀಯ ಹುಲಿ ದಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಬೆನ್ನಲ್ಲೇ ಹಾಸ್ಯಮಯ ಪ್ರಸಂಗ ನಡೆದಿದೆ. ಸಿಎಲ್ ಪಿ ಸಭೆ ಮುಗಿಸಿ ಹೊರ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಎಂ ಜೊತೆಗಿದ್ದ ಅಭಿಮಾನಿಗಳು ಹೌದು ಹುಲಿಯಾ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

ಸುದ್ದಿಗಾರರು ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಮನ ಸೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹೆಚ್ಚೇನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ಜೊತೆಗಿದ್ದವರು ಹೌದು ಹುಲಿಯಾ…ಹುಲಿಗಳ ಸಂಖ್ಯೆ ಏರಿಕೆಯಾಗಿದೆಯಂತೆ… ಕರ್ನಾಟಕಕ್ಕೆ ಒಬ್ಬರೇ ಹುಲಿ ಅದು ಸಿದ್ದರಾಮಯ್ಯ ಎಂದು ಹೇಳಿದರು.

ಬೆಂಬಲಿಗರ ಘೋಷಣೆಗೆ ಸಿಎಂ ಸಿದ್ದರಾಮಯ್ಯ ಮುಗುಳ್ನಕ್ಕು ತೆರಳಿದ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read