ಹಿಮ ಸಹಿತ ಬಿರುಗಾಳಿಯ ಅಬ್ಬರಕ್ಕೆ ಅಮೆರಿಕ ತತ್ತರ; ಮಂಜಿನಲ್ಲಿ ಮುಚ್ಚಿ ಹೋಗಿವೆ ಸಾವಿರಾರು ರಸ್ತೆಗಳು

ಅಮೆರಿಕದ ಮೇಲೆ ಪ್ರಕೃತಿಯ ಮುನಿಸು ಇನ್ನೂ ಕಡಿಮೆಯಾದಂತಿಲ್ಲ. ಚಳಿಗಾಲ  ತೀವ್ರಗೊಳ್ಳುತ್ತಿದ್ದಂತೆ ದೇಶಾದ್ಯಂತ ಮಂಜಿನ ಬಿರುಗಾಳಿ ಬೀಸಲಾರಂಭಿಸಿದೆ. ಹವಾಮಾನ ವೈಪರೀತ್ಯದಿಂದಾಗಿ 1,700 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೆದ್ದಾರಿಗಳು ಮಂಜುಗಡ್ಡೆಯ ಪದರದ ಅಡಿಯಲ್ಲಿ ಜಾರುತ್ತಿವೆ. ಇದರಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರು ಟ್ರಕ್ ಅಡಿಯಲ್ಲಿ ಸಿಲುಕಿದ್ದರು. ಟೆಕ್ಸಾಸ್‌ನಿಂದ ವರ್ಜೀನಿಯಾದವರೆಗೆ ಹಿಮಸಹಿತ ಬಿರುಗಾಳಿ ವ್ಯಾಪಿಸಿದೆ. ಅಲ್ಲಲ್ಲಿ ಮಳೆ ಮತ್ತು ಹಿಮಪಾತವಾಗುತ್ತಿದೆ.

ರಸ್ತೆಗಳೆಲ್ಲ ಸಂಪೂರ್ಣ ಹಿಮದಿಂದ ಆವೃತವಾಗಿರುವುದರಿಂದ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಅನೇಕ ಕಡೆಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿವೆ. ಹಾಗಾಗಿ ರಸ್ತೆ ಸಂಚಾರದಿಂದ ದೂರವಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಮೆರಿಕದ ಪ್ರಮುಖ ಏರ್‌ಪೋರ್ಟ್ ಹಬ್, ಡಲ್ಲಾಸ್-ಫೋರ್ಟ್ ವರ್ತ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಿಂದ ಹೊರಡಬೇಕಿದ್ದ 900 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಡಲ್ಲಾಸ್ ಲವ್ ಫೀಲ್ಡ್‌ನಲ್ಲೂ 250 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಸೌತ್‌ವೆಸ್ಟ್ ಏರ್‌ಲೈನ್ಸ್ 560ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಕೆಲವು ವಿಮಾನಗಳು ತಡವಾಗಿ ಟೇಕಾಫ್‌ ಆಗಿವೆ. ಟೆಕ್ಸಾಸ್‌ನಲ್ಲಿ ಸುಮಾರು 7,000 ಕಡೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ವಿದ್ಯುತ್ ಲೈನ್‌ಗಳ ಮೇಲಿನ ಮಂಜುಗಡ್ಡೆ ಹಾಗೂ ಮರಗಳು ಉರುಳಿವೆ. ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವಾರು ಪ್ರದೇಶಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ.

ಡಲ್ಲಾಸ್‌ನ ಲಿಟಲ್ ರಾಕ್, ಅರ್ಕಾನ್ಸಾಸ್, ಮೆಂಫಿಸ್, ಟೆನ್ನೆಸ್ಸೀ ಮತ್ತು ನ್ಯಾಶ್ವಿಲ್ಲೆಯಲ್ಲಿ ತೀವ್ರ ಹಿಮಪಾತವಾಗುತ್ತಿದೆ. ಕಳೆದ 10 ದಿನಗಳಲ್ಲಿ ಸುಮಾರು 16,700 ವಿಮಾನಗಳ ಹಾರಾಟ ರದ್ದಾಗಿದೆ. ಟೆಕ್ಸಾಸ್ ಮತ್ತು ಆಗ್ನೇಯ ಓಕ್ಲಹೋಮಾದ ಕೆಲವು ಭಾಗಗಳಿಗೆ ಹಾಗೂ ಟೆನ್ನೆಸ್ಸಿಯ ಕೆಲವೆಡೆ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read