ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಗುಟ್ಟು ರಟ್ಟು; ಟೆಲಿ ಪ್ರಾಂಪ್ಟರ್ ನೋಡಿಕೊಂಡು ಮಾಡ್ತಾರಾ ಕಾಮಿಡಿ..?

ಬಾಲಿವುಡ್ ಹಾಸ್ಯ ನಟರಲ್ಲಿ ಕಪಿಲ್‌ ಶರ್ಮಾ ಕೂಡಾ ಒಬ್ಬರು. ಖಾಸಗಿ ಚಾನೆಲ್‌ನಲ್ಲಿ ಬರುವ ʼದಿ ಕಪಿಲ್‌ ಶರ್ಮಾ ಶೋʼ ಕಾರ್ಯಕ್ರಮದ ಮೂಲಕ ನೇಮ್-ಫೇಮ್ ಗಳಿಸಿಕೊಂಡವರು ಕಪಿಲ್. ಕಪಿಲ್ ಶರ್ಮಾ ಮಾತುಮಾತಿನಲ್ಲೇ ಕಚಗುಳಿ ಇಟ್ಟು ಜನರನ್ನ ನಗಿಸೋದ್ರಲ್ಲಿ ಪಂಟರ್‌ ಇತ್ತೀಚೆಗೆ ಇದೇ ಕಪಿಲ್‌ ಶರ್ಮಾ ಮಾಡುತ್ತಿರುವ ಕಾರ್ಯಕ್ರಮದ ಒಂದು ಚಿಕ್ಕ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನಲ್ಲಿ ಕಪಿಲ್ ಟೆಲಿಪ್ರಾಂಪ್ಟರ್ ಓದಿ ಕಾಮಿಡಿ ಮಾಡ್ತಿರೋದನ್ನ ಗಮನಿಸಬಹುದು.

ಈ ವಿಡಿಯೋ ನೋಡಿ ನೆಟ್ಟಿಗರು ಈಗ ಕಪಿಲ್‌ ಶರ್ಮಾ ಕಾಲೆಳೆಯುತ್ತಿದ್ದಾರೆ. ಕಪಿಲ್ ಕಾಮಿಡಿ ಹಿಂದೆ ಇರೋ ಅಸಲಿಯತ್ತು ಇದು ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಟೆಲಿಪ್ರಾಂಪ್ಟರ್ ಇರುವುದನ್ನ ನೋಡಬಹುದು. ಯಾರದೋ ಸ್ಕ್ರಿಪ್ ಇನ್ಯಾರೋ ಕಾಮಿಡಿ ಎಂದು ನೆಟ್ಟಿಗರು ರೇಗಿಸ್ತಿದ್ದಾರೆ. ಇದರಿಂದ ಕಪಿಲ್ ಅಭಿಮಾನಿಗಳು ಫುಲ್ ಗರಂ ಆಗೋಗಿದ್ದಾರೆ.

ಕಪಿಲ್‌ ಶರ್ಮಾ ಮಾಡ್ತಿರೋದ್ರಲ್ಲಿ ತಪ್ಪಾದರೂ ಏನು ಅಂತ ಮತ್ತೆ ಮರುಪ್ರಶ್ನೆ ಮಾಡ್ತಿದ್ದಾರೆ. ಬರೆದಿಟ್ಟಿದ್ದನ್ನ ಯಾರು ಬೇಕಾದರೂ ಓದಬಹುದು. ಆದರೆ ಅದನ್ನ ಕಾಮಿಡಿ ಸ್ಟೈಲ್‌ನಲ್ಲಿ ಹೇಳೋದು ಮುಖ್ಯವಾಗಿರುತ್ತೆ. ಅದು ಕಪಿಲ್ ಅವರಿಂದ ಮಾತ್ರ ಸಾಧ್ಯ. ಕಪಿಲ್‌ ಶರ್ಮಾ ಮಾಡುತ್ತಿರುವ ಕಾರ್ಯಕ್ರಮ ಏನಾದರೂ ಜನ ಮೆಚ್ಚುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ, ಕಪಿಲ್ ಮಾಡೋ ಕಾಮಿಡಿ, ಕಪಿಲ್‌ ಶರ್ಮಾ ತಂಡದಲ್ಲಿರುವ ಸದಸ್ಯರು ಪದೇ ಪದೇ ಬದಲಾಗ್ತಿದ್ದಾರೆ. ಆದರೂ ಈ ಕಾರ್ಯಕ್ರಮ ಹಿಟ್ ಆಗಿದೆ. ಅದಕ್ಕೆ ಕಾರಣ ಕಪಿಲ್ ಅಷ್ಟೆ. ಟೆಲಿಪ್ರಾಂಪ್ಟರ್ ಇರೋದು ಅವರಿಗೆ ಸಹಾಯಕ್ಕಷ್ಟೆ ವಿನಃ, ಅದನ್ನೇ ಓದಿ ಅವರು ಕಾಮಿಡಿ ಮಾಡೋಲ್ಲ. ಮಾಡಿದರೂ ಅದರಲ್ಲಿ ತಪ್ಪೇನಿದೆ ಎಂದು ಕಪಿಲ್ ಅಭಿಮಾನಿಗಳು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read