ಹಾಲು ನಿವಾರಿಸುತ್ತೆ ‘ಗ್ರಹ ದೋಷ’

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಲನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗಿದೆ. ಹಾಲಿಗೆ ಎಳ್ಳು ಸೇರಿಸಿ ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಎಲ್ಲ ಗ್ರಹ ದೋಷ ನಿವಾರಣೆಯಾಗುತ್ತದೆ.

ಹಾಗೆ ಹಾವಿಗೆ ಹಾಲು ಹಾಕುವುದರಿಂದ ರಾಹುವಿನಿಂದ ತಪ್ಪಿಸಿಕೊಳ್ಳಬಹುದು. ಪ್ರತ್ಯೇಕ ಸಮಸ್ಯೆಯನ್ನು ದೂರ ಮಾಡಲು ಪ್ರತ್ಯೇಕ ಉಪಾಯಗಳನ್ನು ಪ್ರಾಚೀನ ಗ್ರಂಥಗಳು ಹೇಳಿವೆ.

ದೃಷ್ಟಿ ಬಿದ್ದಿದೆ ಎನ್ನುವವರು ಈ ಉಪಾಯ ಮಾಡಿ ಯಶಸ್ಸು ಕಾಣಬಹುದಾಗಿದೆ. ಭಾನುವಾರ ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲನ್ನು ತಲೆಯ ಬದಿಯಲ್ಲಿಟ್ಟು ಮಲಗಿ. ಹಾಲು ಚೆಲ್ಲದಂತೆ ನೋಡಿಕೊಳ್ಳಿ. ಬೆಳಿಗ್ಗೆ ನಿತ್ಯಕರ್ಮದ ನಂತ್ರ ಹಾಲನ್ನು ಅಕೆಶಿಯಾ ಗಿಡದ ಬುಡಕ್ಕೆ ಹಾಕಿ. ಹೀಗೆ ಮಾಡುವುದರಿಂದ ಎಲ್ಲ ಕಾರ್ಯದಲ್ಲಿಯೂ ಯಶ ಸಿಕ್ಕಿ, ಧನ ಲಾಭವಾಗುತ್ತದೆ,

ಪದೇ ಪದೇ ಅಪಘಾತವಾಗ್ತಿದ್ದರೂ ಅದರಿಂದ ತಪ್ಪಿಸಿಕೊಳ್ಳಲು ಹಾಲನ್ನು ಬಳಸಬಹುದಾಗಿದೆ. ಶುಕ್ಲ ಪಕ್ಷದ ಮೊದಲ ಮಂಗಳವಾರ ಹಾಲಿಗೆ ಅಕ್ಕಿ ಬೆರೆಸಿ ಹರಿವ ನೀರಿನಲ್ಲಿ ಬಿಡಿ. 7 ಮಂಗಳವಾರಗಳ ಕಾಲ ಹೀಗೆ ಮಾಡ್ತಾ ಬನ್ನಿ.

ಗ್ರಹದೋಷ ಕಂಡುಬಂದಲ್ಲಿ ಸೋಮವಾರ ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗಿ ಶಿವನಿಗೆ ಹಾಲು ಅರ್ಪಿಸಿ. ಸತತ 7 ಸೋಮವಾರ ಹೀಗೆ ಮಾಡುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ.

ಸೋಮವಾರ ಶಿವಲಿಂಗಕ್ಕೆ ಹಾಲಿನ ಜೊತೆ ನೀರು ಸೇರಿಸಿ ಅಭಿಷೇಕ ಮಾಡುವ ಜೊತೆಗೆ ರುದ್ರಾಕ್ಷಿಯನ್ನು ಧರಿಸಿ ‘ಓಂ ಸೋಮೇಶ್ವರಾಯ ನಮಃ’ ಎಂದು ಪ್ರಾರ್ಥನೆ ಮಾಡಿ. 108 ಬಾರಿ ಈ ಮಂತ್ರವನ್ನು ಜಪಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರ್ತಾಳೆಂಬ ನಂಬಿಕೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read