ಹಾಲಿಗೆ ಇದನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

ಬಿಸಿ ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಹಲವಾರು ಅನಾರೋಗ್ಯಗಳನ್ನು ದೂರ ಮಾಡಿ ದೇಹಕ್ಕೆ ಶಕ್ತಿ ತುಂಬುತ್ತದೆ.

* ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ.

* ರಕ್ತಹೀನತೆಯಿಂದ ನರಳುವವರಿಗೆ ಬೆಲ್ಲ ಹಾಕಿದ ಬಿಸಿ ಹಾಲಿನ ಸೇವನೆ ತುಂಬಾ ಬೆಸ್ಟ್‌. ಇದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

* ಬಿಸಿ ಹಾಲು ಮತ್ತು ಬೆಲ್ಲದ ಕಾಂಬಿನೇಷನ್‌ನಲ್ಲಿರುವ ಪೋಷಕಾಂಶಗಳಿಂದ ತಲೆಗೂದಲು ಹೊಳಪಾಗುತ್ತವೆ, ಕೂದಲು ಉದುರುವುದು ನಿಂತು ಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

* ಋತುಸ್ರಾವದ ಸಮಯದಲ್ಲಿ ಕಾಡಿಸುವ ಹೊಟ್ಟೆ ನೋವು, ಬೆನ್ನು ನೋವು ಮುಂತಾದ ಸಮಸ್ಯೆಗಳಿಗೆ ಬೆಲ್ಲ ಹಾಕಿದ ಬಿಸಿ ಹಾಲು ರಾಮಬಾಣವಾಗಿ ಕೆಲಸ ಮಾಡುತ್ತದೆ.

* ಬೆಲ್ಲ ಹಾಕಿದ ಹಾಲಿನಲ್ಲಿ ನೈಸರ್ಗಿಕವಾದ ಆ್ಯಂಟಿ ಬಯೋಟಿಕ್‌ ಮತ್ತು ಆ್ಯಂಟಿ ವೈರಲ್‌ ಗುಣಗಳಿರುತ್ತವೆ. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವೈರಸ್‌ ಸೊಂಕುಗಳು ಕಡಿಮೆಯಾಗುತ್ತವೆ.

* ವೃದ್ಧಾಪ್ಯದಲ್ಲಿ ಕಾಡುವ ಕೀಲು ನೋವು ಸಮಸ್ಯೆಗೂ ಬೆಲ್ಲ ಹಾಕಿದ ಬಿಸಿ ಹಾಲಿನ ಸೇವನೆ ಉತ್ತಮವಾಗಿ ಪರಿಣಮಿಸಿದೆ. ಇದರಿಂದ ನೋವು ಕಡಿಮೆಯಾಗಿ ಕೀಲುಗಳು ಸದೃಢವಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read